ನಾವು ನಡೆಯುತ್ತಿದ್ದೇವೆ. ಕೋಟಿಕೋಟಿ ಹೆಜ್ಜೆಗಳು ಒಟ್ಟಿಗೆ ಮೂಡುತ್ತಿವೆ. ನಮ್ಮ ದನಿ ಸ್ಟ್ರಾಂಗ್ ಆಗಿದೆ.ಒಂದು ಒಳ್ಳೆ ಕಾರಣಕ್ಕಾಗಿ ಸಮುದಾಯದ ಶ್ರೇಯಸ್ಸಿಗಾಗಿ ನಮ್ಮ ಸಂವಿಧಾನಬದ್ಧ ಹಕ್ಕಿಗಾಗಿ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ದಣಿವರಿಯದೆ ನಾವು ಮತ್ತು ಶ್ರೀಜಯಮೃತ್ಯುಂಜಯ ಮಹಾಸ್ವಾಮಿಗಳು ಸಾವಿರಾರು ಸದ್ಭಕ್ತರ ಜೊತೆ ಹೆಜ್ಜೆ ಹಾಕುತ್ತಿದ್ದೇವೆ. ಈಗಾಗಲೇ ನಾವು ದಾವಣಗೆರೆಯಿಂದ 35 ಕಿಲೋಮೀಟರ್ ದೂರ ನಡೆದಿದ್ದೇವೆ. ಇದೊಂದು ಮಹಾ ನಡಿಗೆ.ಪಂಚಮಸಾಲಿ ಇತಿಹಾಸದಲ್ಲಿಯೇ ಒಂದು ಮೈಲುಗಲ್ಲು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವ ತನಕ ನಮ್ಮ ನಡಿಗೆ ನಿಲ್ಲುವುದಿಲ್ಲ. ಕಾಲು ದಣಿಯುವುದಿಲ್ಲ.ನಡೆದು ನಡೆದು ನಮ್ಮ ಪಾದಗಳಲ್ಲಿ ಬೊಬ್ಬೆ ಬಂದಿವೆ. ಅದೊಂದು ಯಮಹಿಂಸೆ. ಬಿಸಲಿನ ಝಳ ನಡೆಯುವವರನ್ನು ನೆತ್ತಿಯಿಂದಿಡಿದು ಅಂಗಾಲಿನ ತನಕ ಸುಡುಸುಡುಸುಡುತ್ತಿದೆ. ಆದರೂ ನಾವು ನಡೆಯುತ್ತೇವೆ. ಕಾಲುಬಿದ್ದರೂ ತೆವಳಿಕೊಂಡಾದರೂ ಗುರಿ ಮುಟ್ಟುತ್ತೇವೆ ಅನ್ನುವ ಆತ್ಮವಿಶ್ವಾಸ ನಮ್ಮಲ್ಲಿದೆ. ನಮ್ಮ ಒಗ್ಗಟ್ಟಿನಲ್ಲಿದೆ. ಈ ಸಲ ನಾವಿಟ್ಟಿರೋದು ನಿರ್ಣಾಯಕ ಹೆಜ್ಜೆ.ನಿರ್ಣಾಯಕ ಹೋರಾಟ.
ಅದಕ್ಕೆ ಏನೆ ಅಡೆತಡೆ ಬಂದರೂ ಬಗ್ಗಲ್ಲ. 2ಎ ಮೀಸಲಾತಿ ಸಿಗದ ಹೊರತು ವಿಶ್ರಮಿಸಲ್ಲ.
ಇದು ಶಪಥ.
ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು
ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.