Connect with us

Dvgsuddi Kannada | online news portal | Kannada news online

ದಾವಣಗೆರೆ: ಬೃಹತ್ ಕೈಗಾರಿಕೆ ಆರಂಭಿಸುವವರಿಗೆ ಹೆಚ್ಚಿನ ಪ್ರೋತ್ಸಾಹ : ಸಚಿವ ಜಗದೀಶ ಶೆಟ್ಟರ್

ಪ್ರಮುಖ ಸುದ್ದಿ

ದಾವಣಗೆರೆ: ಬೃಹತ್ ಕೈಗಾರಿಕೆ ಆರಂಭಿಸುವವರಿಗೆ ಹೆಚ್ಚಿನ ಪ್ರೋತ್ಸಾಹ : ಸಚಿವ ಜಗದೀಶ ಶೆಟ್ಟರ್

ದಾವಣಗೆರೆ :  ಹೊಸ ಕೈಗಾರಿಕಾ ನೀತಿಯನ್ವಯ ಬೆಂಗಳೂರು ಹೊರತುಪಡಿಸಿ ದಾವಣಗೆರೆಯಂತಹ ನಗರಗಳಲ್ಲಿ ಬೃಹತ್ ಕೈಗಾರಿಕೆಗಳನ್ನು ಆರಂಭಿಸಲು ಮುಂದೆ ಬರುವ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹಧನ ಹಾಗೂ ಇತರೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರಾದ ಜಗದೀಶ ಶೆಟ್ಟರ ಹೇಳಿದರು. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇವೆ; ಮತ್ತೆ ಕನ್ನಡಿಗನ್ನು ಕೆಣಕಿದ ಮಹಾರಾಷ್ಟ್ರ ಸಿಎಂ

ಇಲ್ಲಿನ ಉದ್ಯಮಿಗಳು ಸುಮಾರು 10 ವರ್ಷಗಳಿಂದ ನಗರಸಭೆಗೆ ತೆರಿಗೆ ಪಾವತಿಸಿಲ್ಲ. ಅದಕ್ಕೆ ದಂಡ ಹಾಕಿದ್ದಾರೆ ಹೌದು. ಆದರೆ ಪ್ರಸಕ್ತ ಸಾಲಿನ ತೆರಿಗೆ ಪಾವತಿಸಿಕೊಳ್ಳುವಂತೆ ನಗರಸಭೆ ಆಯುಕ್ತರಿಗೆ ಸಚಿವರು ಸೂಚನೆ ನೀಡಿದರು ಹಾಗೂ ನಾವು ಅನುದಾನ ನೀಡುತ್ತೇವೆ ರಸ್ತೆ ನಿರ್ಮಿಸಿಕೊಡುವಂತೆ ತಿಳಿಸಿದರು. ಉದ್ಯಮಿಗಳು ಒಂದು ವಾರದಲ್ಲೇ ಪ್ರಸಕ್ತ ಸಾಲಿನ ತೆರಿಗೆ ತುಂಬುವುದಾಗಿ ಭರವಸೆ ನೀಡಿದರು.

ಸಚಿವರು ಮಾತನಾಡಿ, ಜವಳಿ ಪಾರ್ಕಿನಲ್ಲಿ ಜವಳಿ ಹೊರತಾಗಿ ಇತರೆ ಕೈಗಾರಿಕೆಗಳಿಗೆ ಅವಕಾಶ ಮಾಡಿಕೊಡಬೇಕೆಂದು ನನಗೆ ಮನವಿಗಳು ಬಂದಿವೆ ಈ ಬಗ್ಗೆ ಜವಳಿ ಇಲಾಖೆ ಅಧಿಕಾರಿಗಳು ಮತ್ತು ಜವಳಿ ಉದ್ದಿಮೆದಾರರ ಅಭಿಪ್ರಾಯ ಕೇಳಿದರು. ಶಿವಮೊಗ್ಗ ಸ್ಫೋಟಕ ಪ್ರಕರಣ; ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಸಚಿವರು ಪ್ರತಿಕ್ರಿಯಿಸಿ, ಕ್ರಯಪತ್ರ ವಿಚಾರದ ಕುರಿತು ನನಗೆ ಅರಿವಿದ್ದು ಇದನ್ನು ನಾನು ಅನುಸರಣೆ ಮಾಡುತ್ತಾ ಬಂದಿದ್ದೇನೆ. ಈಗ ಈ ನಿವೇಶನಗಳಿಗೆ ಖಾತೆ ಆಗಿದ್ದು ಇನ್ನೊಂದು ವಾರದಲ್ಲಿ ಪೋಡಿ ಮಾಡುವಂತೆ ಹರಿಹರ ತಹಶೀಲ್ದಾರರಿಗೆ ಸೂಚನೆ ನೀಡಿದ್ದೇನೆ. ಇನ್ನೊಂದು ವಾರದಲ್ಲಿ ಸೇಲ್‍ಡೀಡ್ ಪ್ರಕ್ರಿಯೆ ಆಗಿ, 15 ದಿನಗಳ ಒಳಗೆ ತಮಗೆ ಸ್ಥಳೀಯ ಸಚಿವರು, ಶಾಸಕರನ್ನೊಳಗೊಂಡಂತೆ ನಾನೇ ಕ್ರಯಪತ್ರಗಳನ್ನು ವಿತರಿಸುತ್ತೇನೆ ಎಂದರು.  ಕೈಗಾರಿಕೆಗಳಿಗೆ ವಿದ್ಯುತ್ ದರ ಕ್ಕೆ ಸಂಬಂಧಿಸಿದಮತೆ ಪ್ರತ್ಯೇಕ ನಿಯಮ ರೂಪಿಸುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತಿದೆ.

ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸುರೇಶ್ ಎನ್.ತಡಕನಹಳ್ಳಿ ಮಾತನಾಡಿ, 2002 ನೇ ಸಾಲಿನಲ್ಲಿ ಟೆಕ್ಸ್‍ಟೈಲ್ ಪಾರ್ಕ್ ಉದ್ದೇಶಕ್ಕಾಗಿ ಕೆಐಎಡಿಬಿಯಿಂದ 64 ಎಕರೆ ಕೈಗಾರಿಕಾ ಪ್ರದೇಶಾಭಿವೃದ್ದಿ ಮಾಡಲಾಗಿದ್ದು 71 ಜವಳಿ ಘಟಕಗಳನ್ನು ಪ್ರಾರಂಭಿಸಲಾಗಿತ್ತು. ಅದರಲ್ಲಿ 51 ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಪೈಕಿ ಕೊರೊನಾ ಹಿನ್ನೆಲೆಯಲ್ಲಿ 23 ಘಟಕಗಳು ಸ್ಥಗಿತಗೊಂಡಿವೆ. 2012 ರಿಂದ 19ನೇ ಸಾಲಿನವರೆಗೆ 39 ಘಟಕಗಳಿಗೆ ಒಟ್ಟು ರೂ.9.15 ಕೋಟಿ ಸಬ್ಸಿಡಿ ನೀಡಲಾಗಿದೆ. ಈ ಪ್ರದೇಶವನ್ನು ಜವಳಿ ಉದ್ಯಮಗಳಿಗೆ ಮೀಸಲಿಟ್ಟರೆ ಒಳಿತು ಎಂದು ಹೇಳಿದರು.

ಹರಿಹರದ ವೆಲ್ಕಾಸ್ಟ್ ಫೌಂಡ್ರಿಯ ಉದ್ಯಮಿ ಸತ್ಯನಾರಾಯಣ ಮಾತನಾಡಿ, ಪ್ರತಿ ವರ್ಷ ವಿದ್ಯುತ್ ದರ ಹೆಚ್ಚುಸುತ್ತಿರುವ ಕಾರಣ ರಫ್ತಿಗೆ ತೊಂದರೆಯಾಗುತ್ತಿದೆ. ಆದ ಕಾರಣ ಕೈಗಾರಿಕೆಗಳಿಗೆ ಕನಿಷ್ಟ ಮೂರು ವರ್ಷಗಳಿಗೊಮ್ಮೆ ದರ ಹೆಚ್ಚಿಸಬೇಕೆಂದು ಹಾಗೂ ಕುಡಿಯುವ ನೀರು ವ್ಯವಸ್ಥೆ ಮಾಡಿಕೊಡಬೇಕೆಂದು ಸಚಿವರಿಗೆ ಮನವಿ ಮಾಡಿದರು.

ಗ್ರೀನ್ ಆಗ್ರೋಪ್ಯಾಕ್ ಪ್ರೈ.ಲಿ ನ ದೇವಯ್ಯ ಮಾತನಾಡಿ, ತಾವು ತರಕಾರಿಗಳನ್ನು ಯೂರೋಪ್‍ಗೆ ರಫ್ತು ಮಾಡುತ್ತಿದ್ದು, ತಮ್ಮ 15 ಬ್ರಾಂಚ್‍ಗಳಿವೆ, ಸುಮಾರು 10 ಸಾವಿರ ರೈತರಿಗೆ ಈ ಉದ್ದಿಮೆಯಿಂದ ಅನುಕೂಲವಾಗುತ್ತಿದೆ. ಕೊಗ್ಗನೂರಿನಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲಾಗುತ್ತಿದ್ದು, ಗ್ರಾಮೀಣ ಫೀಡರ್‍ನಿಂದ ವಿದ್ಯುತ್‍ಗೆ ತೊಂದರೆಯಾಗುತ್ತಿದೆ. ಹಾಗೂ ರಫ್ತು ಮಾಡಲು ಕಂಟೈನರ್ ಕೊರತೆ ಜೊತೆಗೆ ಕಂಟೈನರ್ ದರ ಮೂರು ಪಟ್ಟು ಹೆಚ್ಚಿದೆ ಈ ಬಗ್ಗೆ ಸೂಕ್ತ ಕೈಗೊಳ್ಳುವಂತೆ ಕೋರಿದರು.

ಮೆಕ್ಕೆಜೋಳ ಉದ್ಯಮಿ ಹಾಗೂ ರೈತರಾದ ಬಸವರಾಜಪ್ಪ ಮಾತನಾಡಿ, ತಾವು ರೈತರಾಗಿದ್ದು ಮೆಕ್ಕೆಜೋಳ ಸಂಸ್ಕರಿಸಿ ಇತರೆ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ತಾವು ಸೇರಿದಂತೆ ಮೆಕ್ಕೆಜೋಳ ಸಂಸ್ಕರಣಾ ಘಟಕಕ್ಕೆ ತಮಗೆ ರೂ.2.5 ಕೋಟಿ ಮಂಜೂರಾಗಿದ್ದು ಬ್ಯಾಂಕಿನಿಂದ ರೂ.1 ಕೋಟಿ ಮಾತ್ರ ಬಿಡುಗಡೆ ಆಗಿದೆ. ವರ್ಕಿಂಗ್ ಕ್ಯಾಪಿಟಲ್ ಬಿಡುಗಡೆ ಆಗಿಲ್ಲ. ಅದರ ಹೊರತು ಕೆಲಸ ಮಾಡುವುದು ಕಷ್ಟವಾಗಿದೆ ಎಂದರು.

ಲೀಡ್‍ಬ್ಯಾಂಕ್ ಮ್ಯಾನೇಜರ್ ಸುಶೃತ ಡಿ ಶಾಸ್ತ್ರಿ ಪ್ರತಿಕ್ರಿಯಿಸಿ, 8 ಮೆಕ್ಕೆಜೋಳ ಘಟಕಗಳಿಗೆ ಸಾಲ ಮಂಜೂರಾಗಿದ್ದು, ಯೋಜನಾ ವರದಿ ಪ್ರಕಾರ 2 ವರ್ಷದೊಳಗೆ ಮಷಿನರಿ ಅಳವಡಿಕೆ ಆಗಿಬೇಕು. ಆಗ ವರ್ಕಿಂಗ್ ಕ್ಯಾಪಿಟಲ್ ಬಿಡುಗಡೆ ಮಾಡಲಾಗುವುದು. ಆದರೆ ಈ ಘಟಕಗಳಲ್ಲಿ ಮಷಿನರಿ ಸೆಟ್‍ಅಪ್ ಆಗಿಲ್ಲ. ವಿದ್ಯುತ್ ಸಂಪರ್ಕವೂ ಇಲ್ಲದ ಕಾರಣ ವರ್ಕಿಂಗ್ ಕ್ಯಾಪಿಟಲ್ ನೀಡಿಲ್ಲವೆಂದರು.

ಸಚಿವರು ಹಾಗೂ ಎಂಡಿ ಯವರು, ರೈತರು ಉದ್ಯಮ ಮಾಡುತ್ತಿರುವುದು ಸಂತಸದ ವಿಚಾರವಾಗಿದ್ದು, ಅಧಿಕಾರಿಗಳು, ಸಾಲ ನೀಡುವಲ್ಲಿ ಆಗುತ್ತಿರುವ ಗೊಂದಲಗಳನ್ನು ನಿವಾರಿಸಿ ಪರಿಹಾರ ಹುಡುಕಿ ವರ್ಕಿಂಗ್ ಕ್ಯಾಪಿಟಲ್ ನೀಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಇಲ್ಲಿ ಇಂದು ಅನೇಕರು ಬ್ಯಾಂಕ್ ಸಾಲ ನೀಡುತ್ತಿಲ್ಲವೆಂದು ದೂರುತ್ತಿದ್ದೀರಿ. ಇದು ಎಲ್ಲೆಡೆ ಇರುವ ಸಮಸ್ಯೆ. ಹಂತ ಹಂತವಾಗಿ ಬಗೆಹರಿಯಲಿದೆ ಎಂದರು.

ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಉದ್ಯಮಿ ಶಂಭುಲಿಂಗಪ್ಪ ಮಾತನಾಡಿ, ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಎಲ್‍ಟಿ ಸಂಪರ್ಕಕ್ಕೆ 65 ಹೆಚ್‍ಪಿ ನೀಡಲಾಗುತ್ತಿದ್ದು ಮುಂದಿನ ಬಜೆಟ್‍ನಲ್ಲಿ 100 ಕ್ಕೆ ಹೆಚ್ಚಿಸುವಂತೆ ಹಾಗೂ ಕರೂರಿನಲ್ಲಿ ಯುಜಿಡಿ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.

ಕೆಎಸ್‍ಎಸ್‍ಐಡಿ ಎಂಡಿ ವಿ.ರಾಮಪ್ರಸಾತ್ ಮನೋಹರ್ ಪ್ರತಿಕ್ರಿಯಿಸಿ, ಪಾಲಿಕೆಯ ಅಮೃತ್ ಯೋಜನೆಯಡಿ ಯುಜಿಡಿ ಗೆ ಕ್ರಮ ವಹಿಸಬಹುದು. ಜೊತೆಗೆ ಯುಜಿಡಿ ನಿರ್ಮಾಣ ಕುರಿತು ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಪರಿಹಾರದ ಭೂಮಿ ಕೊಡುವಂತೆ ರೈತರ ಮನವಿ : ಕರೂರು ಕೈಗಾರಿಕಾ ಪ್ರದೇಶಕ್ಕೆ ಸುಮಾರು 15 ವರ್ಷಗಳ ಹಿಂದೆ ರೈತರು 143 ಎಕರೆ ಭೂಮಿಯನ್ನು ಕೆಐಎಡಿಬಿಯವರಿಗೆ ನೀಡಿದ್ದು, ಈ ಭೂಮಿಗೆ ಬದಲಾಗಿ ತಮಗೆ ಬೇರೆ ಭೂಮಿ ನೀಡುವಂತೆ ಕೋರಿದ್ದು, ಈವರೆಗೆ ಭೂಮಿ ನೀಡಿಲ್ಲ. 15 ವರ್ಷಗಳಿಂದ ಸತತವಾಗಿ ಹೋರಾಡುತ್ತಾ ಬಂದಿದ್ದೇವೆ. ಇದರಲ್ಲಿ ಕೆವಲರು ಮೃತ ಹೊಂದ್ದಾರೆ. ತಕ್ಷಣ ತಮಗೆ ಭೂಮಿ ನೀಡಬೇಕೆಂದು ರೈತರು ಒತ್ತಾಯಿಸಿದರು.

ಸಚಿವರು ಪ್ರತಿಕ್ರಿಯಿಸಿ ಇದು ಸುಮಾರು 15 ವರ್ಷಗಳ ಸಮಸ್ಯೆಯಾಗಿದ್ದು ಇದಕ್ಕೆ ಪರಿಹಾರ ಒದಗಿಸಲಾಗುತ್ತಿದೆ. ಭೂಮಿಗೆ ಪರಿಹಾರವಾಗಿ ಭೂಮಿ ನೀಡುವ ಬಗ್ಗೆ ಸರ್ಕಾರದ ಹಂತದಲ್ಲಿ ನಿಯಮ ರೂಪಿಸಲಾಗುತ್ತಿದೆ. ಸ್ವಲ್ಪ ಸಮಯ ನೀಡಿ. ಶೀಘ್ರದಲ್ಲೇ ತಮಗೆ ಪರಿಹಾರ ಒದಗಿಸಲಾಗುವುದು ಎಂದು ರೈತರ ಮನವೊಲಿಸಿದರು.

ರೈಸ್‍ಮಿಲ್ ಮಾಲೀಕರು ಮಾತನಾಡಿ ಹಿಂದೆ ದಾವಣಗೆರೆಯಲ್ಲಿ 100 ರೈಸ್‍ಮಿಲ್‍ಗಳಿದ್ದವು ಈಗ 40 ರಿಂದ 50 ಮಾತ್ರ ಇವೆ. ರೈಸ್‍ಮಿಲ್‍ಗಳಿಗೆ ಬರುವ ಸಬ್ಸಿಡಿ ನಿಂತಿದ್ದು, ಶೀಘ್ರವೇ ಇದನ್ನು ನೀಡುವಂತೆ ಹಾಗೂ ವಿದ್ಯುತ್ ಸಬ್ಸಿಡಿ ನೀಡುವಂತೆ ಕೋರಿದರು.

ಶಾಸಕರಾದ ಎಸ್.ಎ.ರವೀಂದ್ರನಾಥ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ಗ್ರಾಮಾಂತರ ಕೈಗಾರಿಕೆ ಇಲಾಖೆ ಉಪ ನಿರ್ದೇಶಕರ ಮನ್ಸೂರ್, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಜಯಪ್ರಕಾಶ್ ನಾರಾಯಣ್, ಉಪ ನಿರ್ದೇಶಕರಾದ ಮಂಜುನಾಥ್, ಭೂಸ್ವಾಧೀನ ಅಧಿಕಾರಿ ಸರೋಜಾ, ಕೆಎಸ್‍ಎಫ್‍ಸಿ ಪ್ರಧಾನ ವ್ಯವಸ್ಥಾಪಕರಾದ ಬಸವರಾಜು, ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ, ಉಪ ಜಿಲ್ಲಾ ಪರಿಸರ ಅಧಿಕಾರಿ ಸಂತೋಷ್, ಹರಿಹರ ನಗರಸಭೆ ಆಯುಕ್ತ ಉದಯ್ ಕುಮಾರ್.ಬಿ.ಟಿ, , ಕಾರ್ಮಿಕ ಅಧಿಕಾರಿ ಇಬ್ರಾಹೀಂ ಸಾಬ್, ಹರಿಹರ ಕೈಗಾರಿಕ ಸಂಘದ ಅಧ್ಯಕ್ಷರು ಇತರೆ ಕೈಗಾರಿಕಾ ಸಂಘದ ಅಧಿಕಾರಿಗಳು, ಉದ್ಯಮಿಗಳು, ರಫ್ತುದಾರರು ಉಪಸ್ಥಿತರಿದ್ದರು.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top