Connect with us

Dvgsuddi Kannada | online news portal | Kannada news online

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಜಯ; ಮತ್ತೆ ಮೋಡಿ ಮಾಡಿದ ಯೋಗಿ ಆದಿತ್ಯಾನಾಥ್

ಪ್ರಮುಖ ಸುದ್ದಿ

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಜಯ; ಮತ್ತೆ ಮೋಡಿ ಮಾಡಿದ ಯೋಗಿ ಆದಿತ್ಯಾನಾಥ್

ಲಖನೌ: ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರ ನಡೆಸುವತ್ತ ಬಿಜೆಪಿ ಹೆಜ್ಜೆ ಇಟ್ಟಿದೆ. ಮತ್ತೆ ಸಿಎಂ ಆಗುವ ಕನಸಿನಲ್ಲಿದ್ದ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಗೆ  ಯೋಗಿ ಆದಿತ್ಯಾನಾಥ್ ನೇತೃತ್ವದ ಬಿಜೆಪ ಗೆಲುವಿನೊಂದಿಗೆ 250 ಸ್ಥಾನ ಗೆಲುವಿನತ್ತ  ಮುನ್ನುಗ್ಗಿದೆ.

ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಅಂದರೆ 252 ಸ್ಥಾನಗಳಲ್ಲಿ ಬಿಜೆಪಿ ಮುನ್ನೆಡೆ ಕಾಯ್ದುಕೊಂಡಿದೆ.  ಈ ಮೂಲಕ ಯೋಗಿ ಆದಿತ್ಯಾನಾಥ್ ನೇತೃತ್ವದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲು ಬಿಜೆಪಿ  ಸಜ್ಜಾಗಿ ನಿಂತಿದೆ. ಇನ್ನು 2ನೇ ಅತೀ ದೊಡ್ಡ ಪಕ್ಷವಾಗಿ ಸಮಾಜವಾದಿ ಪಕ್ಷವು ಇದ್ದು ಈ ವರೆಗಿನ ಫಲಿತಾಂಶದಲ್ಲಿ ಎಸ್ ಪಿ ಪಕ್ಷ 112 ಸ್ಥಾನಗಳಲ್ಲಷ್ಟೇ ಮುನ್ನಡೇ ಕಾಯ್ದುಕೊಂಡಿದೆ. ಉಳಿದಂತೆ ಮಾಯಾವತಿ ಅವರ ಬಿಎಸ್ ಪಿ 8, ಕಾಂಗ್ರೆಸ್ 8 ಮತ್ತು ಇತರರು 4 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇನ್ನು ದೇಶದ ಅತೀ ದೊಡ್ಡ ಮತ್ತು ಅತೀ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ ಎಂಬ ಕೀರ್ತಿಯೂ ಉತ್ತರ ಪ್ರದೇಶಕ್ಕಿದ್ದು, ಒಟ್ಟು 80 ಸಂಸದೀಯ ಸ್ಥಾನಗಳನ್ನು ಹೊಂದಿದೆ. ಹೀಗಾಗಿ ಉತ್ತರ ಪ್ರದೇಶವು ಕೇಂದ್ರದಲ್ಲಿ ಅಧಿಕಾರದ ಕೀಲಿಯನ್ನು ಹೊಂದಿದೆ ಎನ್ನಲಾಗುತ್ತದೆ.

ಇನ್ನು ಒಟ್ಟು 403 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತದತ್ತ ಸಾಗಿದ್ದು, ಆ ಮೂಲಕ ಮೂರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ಸತತ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ ಮೊದಲ ಪಕ್ಷ ಎಂಬ ಕೀರ್ತಿಗೆ ಬಿಜೆಪಿ ಭಾಜನವಾಗಲಿದೆ.

ಬಿಜೆಪಿಗೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಉತ್ತರಪ್ರದೇಶದಲ್ಲಿ ಬಿಜೆಪಿಗೆ ಅತ್ಯಂತ ದೊಡ್ಡ ಸವಾಲಾಗಿದೆ ಎಂದು ಪರಿಗಣಿಸಲಾಗಿತ್ತು. ಇದು ಇತರೆ ಸಣ್ಣ ಪಕ್ಷಗಳೊಂದಿಗೆ ವೈವಿಧ್ಯಮಯ ಒಕ್ಕೂಟವನ್ನು ರಚಿಸಿತ್ತು, ಇದು ಇತರ ಹಿಂದುಳಿದ ವರ್ಗಗಳ ಮತದಾರರೊಂದಿಗೆ ತನ್ನ ಮುಸ್ಲಿಂ-ಯಾದವ್ ಬೆಂಬಲದ ನೆಲೆಯನ್ನು ಪೂರೈಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ರಾಜ್ಯದ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ನಿರ್ಣಾಯಕ ಈ ಮುಸ್ಲಿಮ್ ಮತದಾರರು ನಿರ್ಣಾಯಕರಾಗಿದ್ದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top