ಮುಂಬೈ: ಯುಪಿಎಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ದುರ್ಬಲವಾಗಿದ್ದು, ಮೈತ್ರಿಕೂಟವನ್ನು ಬಲಪಡಿಸಲು ಪ್ರತಿಪಕ್ಷಗಳು ಒಗ್ಗಟ್ಟಾಗಬೇಕಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಎನ್‌ಸಿಪಿಯ ಶರದ್ ಪವಾರ್ ಅವರು ಯುಪಿಎಯ ಅಧ್ಯಕ್ಷರಾಗುವುದಾದರೆ ನಮ್ಮ ಮನವಿಯಾಗಿದೆ. ಅವರು ಅದನ್ನು ನಿರಾಕರಿಸಿದ್ದಾರೆಂದು ತಿಳಿಸಿದಿದೆ. ಅವರು ಅಧ್ಯಕ್ಷರಾಗಬೇಕೆಂಬ ಅಧಿಕೃತ ಪ್ರಸ್ತಾವನೆ ಮಂಡನೆಯಾದರೆ , ನಾವು ಈ ನಿರ್ಧಾರವನ್ನು ಬೆಂಬಲಿಸುತ್ತೇವೆ. ಕಾಂಗ್ರೆಸ್ ದುರ್ಬಲವಾಗಿದೆ. ಹೀಗಾಗಿ ಪ್ರತಿಪಕ್ಷಗಳು ಒಗ್ಗಟಾಗಬೇಕಾದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ದೊಡ್ಡ ಪಕ್ಷವಾಗಿದ್ದು, ಇಂಥ ವಿಚಾರಗಳು ದೊಡ್ಡದಾಗಿರುವುದರಿಂದ ಆ ಪಕ್ಷದವರೇ ನಿರ್ಧಾರ ಕೈಗೊಳ್ಳಬೇಕು. ಮಹಾರಾಷ್ಟ್ರದಲ್ಲಿ ಮೈತ್ರಿ ರಚನೆಯಾದಂತೆ ರಾಷ್ಟ್ರಮಟ್ಟದಲ್ಲಿಯೂ ಮೈತ್ರಿ ರಚನೆಯಾಗಬೇಕು ಎಂದು ಹೇಳಿದ್ದಾರೆ.