Connect with us

Dvgsuddi Kannada | online news portal | Kannada news online

ಅಗ್ಗದ ಬೆಲೆಗೆ ಆಸ್ತಿ ಖರೀದಿಸುವ ಪ್ಲಾನ್ ಇದ್ಯಾ; ಎಸ್ ಬಿಐ ಕಲ್ಪಿಸಿದೆ ಸುವರ್ಣಾವಕಾಶ..!

ಪ್ರಮುಖ ಸುದ್ದಿ

ಅಗ್ಗದ ಬೆಲೆಗೆ ಆಸ್ತಿ ಖರೀದಿಸುವ ಪ್ಲಾನ್ ಇದ್ಯಾ; ಎಸ್ ಬಿಐ ಕಲ್ಪಿಸಿದೆ ಸುವರ್ಣಾವಕಾಶ..!

ಬೆಂಗಳೂರು: ಅಗ್ಗದ ಬೆಲೆಗೆ ಆಸ್ತಿ ಖರೀದಿಸುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಅವಕಾಶವನ್ನು ನೀಡ್ತಿದೆ.

ಬ್ಯಾಂಕ್ ಗೆ ಮರು ಪಾವತಿಯಾಗದ ಸಾಲದ ಆಸ್ತಿಗಳನ್ನು ಹರಾಜು ಹಾಕುತ್ತಿದೆ. ಈ ಮೆಗಾ ಇ-ಹರಾಜು ಮಾರ್ಚ್ 5 ರಿಂದ ಶುರುವಾಗಲಿದೆ. ಎಸ್‌ಬಿಐ ಹರಾಜು ಮಾಡುವ ಆಸ್ತಿಯಲ್ಲಿ ವಸತಿ, ವಾಣಿಜ್ಯ, ಕೈಗಾರಿಕೆ ಸೇರಿದಂತೆ ವಿವಿಧ ಬಗೆಯ ಆಸ್ತಿಗಳಿವೆ.

ಎಸ್.ಬಿ.ಐ. ಹರಾಜಿಗೆ ಬಂದ ಆಸ್ತಿಯ ಸಂಪೂರ್ಣ ದಾಖಲೆಗಳನ್ನು ಪಾರದರ್ಶಕವಾಗಿಡುತ್ತದೆ. ಈ ಬಗ್ಗೆ ಎಸ್.ಬಿ.ಐ. ತನ್ನ ಟ್ವಿಟ್ಟರ್ ಪೋಸ್ಟ್ ಮಾಡಿದೆ. ಕೈಗೆಟುಕುವ ವಸತಿ ಮತ್ತು ವಾಣಿಜ್ಯ ಆಸ್ತಿ, ಭೂಮಿ, ಯಂತ್ರೋಪಕರಣಗಳು, ವಾಹನಗಳು ಮತ್ತು ಇನ್ನೂ ಹೆಚ್ಚಿನದನ್ನು ಖರೀದಿಸುವ ಅವಕಾಶ ಇಲ್ಲಿದೆ. ಎಸ್‌ಬಿಐ ಮೆಗಾ ಇ-ಹರಾಜಿನಲ್ಲಿ ಭಾಗವಹಿಸಿ ಮತ್ತು ಅತ್ಯುತ್ತಮ ಬಿಡ್ ಮಾಡಿ ಎಂದು ಬರೆದಿದೆ.

ಎಸ್.ಬಿ.ಐ. ಟ್ವಿಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಇ-ಹರಾಜಿನಲ್ಲಿ ಭಾಗವಹಿಸಲು, ಹಣ ಠೇವಣಿ ಮಾಡಬೇಕು. ಇ-ಹರಾಜಿನಲ್ಲಿ ಭಾಗವಹಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಕೆವೈಸಿಯ ಸಂಪೂರ್ಣ ವಿವರಗಳಿಗಾಗಿ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ಮಾನ್ಯ ಡಿಜಿಟಲ್ ಸಹಿ ಅಗತ್ಯವಿರುತ್ತದೆ.

ಹರಾಜಿನಲ್ಲಿ ಭಾಗವಹಿಸಲು ಬಯಸಿದರೆ, ಇ-ಹರಾಜುದಾರರಿಗೆ ಅಥವಾ ಇನ್ನಾವುದೇ ಮಾನ್ಯತೆ ಪಡೆದ ಏಜೆನ್ಸಿಗೆ ಹೋಗಿ ಡಿಜಿಟಲ್ ಸಹಿಯನ್ನು ಪಡೆಯಬಹುದು. ಶಾಖೆಯಲ್ಲಿ ಇಎಮ್‌ಡಿ ಮತ್ತು ಕೆವೈಸಿ ದಾಖಲೆಗಳನ್ನು ನೀಡಿದ ನಂತರ ಲಾಗಿನ್ ಐಡಿ ಮತ್ತು ಪಾಸ್ವರ್ಡ್,ಇಮೇಲ್ ಐಡಿಗೆ ಕಳುಹಿಸಲಾಗುವುದು. ಅದರ ಮೂಲಕ ಹರಾಜಿನಲ್ಲಿ ಭಾಗವಹಿಸಬಹುದು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top