ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದ ಬಳಿಕ ಭಾರತೀಯ ರೈಲ್ವೆ ಇಂದು ಹೊಸ ಆದೇಶ ಹೊರಡಿಸಿದೆ.
ಇದರಿಂದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಇನ್ಮುಂದೆ ಪ್ಲಾಟ್ ಫಾರ್ಮ್ ಟಿಕೆಟ್ ದರ ಏರಿಕೆಯಾಗಲಿದೆ. ‘ಕೋವಿಡ್-19 ಸೋಂಕಿನ ಕಾರಣದಿಂದ ನಿಲ್ದಾಣಗಳಲ್ಲಿ ಪ್ರವೇಶ ನೀಡುವುದನ್ನು ನಿರ್ಬಂಧಿಸುವ ಉದ್ದೇಶದಿಂದ ಪ್ಲಾಟ್‌ಫಾರ್ಮ್ ಟಿಕೆಟ್ ಬೆಲೆಯನ್ನು ಏರಿಸಲಾಗಿದೆ. ಇದರಿಂದ ರೈಲ್ವೆ ನಿಲ್ದಾಣಗಳಲ್ಲಿ ಸೋಂಕು ಹರಡುವ ಅಪಾಯ ತಗ್ಗಲಿದೆ ಎಂದು ಇಲಾಖೆ ಹೇಳಿದೆ.
ಹಬ್ಬದ ಅವಧಿಯಲ್ಲಿ ಬೆಂಗಳೂರಿನ ಕೆಲವು ನಿಲ್ದಾಣಗಳು ಸೇರಿದಂತೆ ದೇಶದ 260ಕ್ಕೂ ಅಧಿಕ ಪ್ರಮುಖ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಬೆಲೆ 10 ರಿಂದ 50 ರೂಪಾಯಿಗೆ ಏರಿಕೆ ಮಾಡಲಾಗಿದೆ. ಈ ಆದೇಶ ತಾತ್ಕಾಲಿಕವಾಗಿ ಜಾರಿಯಲ್ಲಿರಲಿದೆ. ಇನ್ನು ಕೆಲವು ಕಡೆ 10 ರೂಪಾಯಿ ಇರುವ ಟಿಕೆಟ್ ದರವನ್ನು 30 ರೂಪಾಯಿಗೆ ಏರಿಕೆ ಮಾಡಲಾಗಿದೆ. ಜೊತೆಗೆ ಸ್ಥಳೀಯ ಸಂಚಾರದ ಟಿಕೆಟ್ ದರವೂ ಏರಿಕೆಯಾಗಿದೆ



