Connect with us

Dvgsuddi Kannada | online news portal | Kannada news online

ಕೇಂದ್ರ ಕೃಷಿ ಮಸೂದೆ ವಿರೋಧಿಸುವ ನಿರ್ಣಯ ಕೈಗೊಂಡ ಪಂಜಾಬ್ ಸರ್ಕಾರ

ರಾಷ್ಟ್ರ ಸುದ್ದಿ

ಕೇಂದ್ರ ಕೃಷಿ ಮಸೂದೆ ವಿರೋಧಿಸುವ ನಿರ್ಣಯ ಕೈಗೊಂಡ ಪಂಜಾಬ್ ಸರ್ಕಾರ

ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಮಸೂದೆ  ವಿರೋಧಿಸುವ ನಿರ್ಣಯವನ್ನು ಪಂಜಾಬ್‌ ಸರ್ಕಾರ ಕೈಗೊಂಡಿದೆ. ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ನಿರ್ಣಯ  ಕೈಗೊಂಡಿದ್ದು, ಮಂಗಳವಾರ ವಿಧಾನಸಭೆಯಲ್ಲಿ ಈ ನಿರ್ಣಯ ಮಂಡನೆಯಾಗಿದೆ.  ರಾಜ್ಯದ ರೈತರ ರಕ್ಷಣೆಗಾಗಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಕೇಂದ್ರದ ವಿದ್ಯುತ್‌ (ತಿದ್ದುಪಡಿ) ಮಸೂದೆಯನ್ನು ತಿರಸ್ಕರಿಸಲೂ ನಿರ್ಣಯ ಕೈಗೊಂಡಿದ್ದಾರೆ.

ರಾಜ್ಯದ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿ ಬದಿಗಿಟ್ಟು ಈ ನಿರ್ಣಯ ರಕ್ಷಿಸಬೇಕು ಎಂದು ಅಮರಿಂದರ್ ಸಿಂಗ್ ಮನವಿ ಮಾಡಿದ್ದಾರೆ. ವಿವಿಧ ತಜ್ಞರೊಂದಿಗೆ ಚರ್ಚೆ ನಡೆಸಿ ಕೃಷಿ ವಿರೋಧಿ ಕಾನೂನು ವಿರುದ್ಧದ ನಿರ್ಣಯ ಮಂಡನೆಗೆ ಸಹಿ ಹಾಕಿದ್ದೇನೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top