ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ತಿಂಗಳ ಮೊದಲ ದಿನವಾದ ಇಂದು (ಜೂ. 01) ಸಿಹಿ ಸುದ್ದಿ ನೀಡಿವೆ. ವಾಣಿಜ್ಯ LPG ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 24 ರೂ.ಗಳಷ್ಟು ಕಡಿತ ಮಾಡಲಾಗಿದೆ.
ಇಂದಿನಿಂದ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ LPG ಸಿಲಿಂಡರ್ ಬೆಲೆ 1723.50 ರೂ.ಗಳಾಗಿರುತ್ತದೆ. ಈ ಸಂದರ್ಭದಲ್ಲಿ ದೇಶೀಯ LPG ಗ್ಯಾಸ್ ಸಿಲಿಂಡರ್‌ಗಳ ( ಗೃಹ ಬಳಕೆ ) ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ಈ ಹೊಸ ಬೆಲೆಯು ವಾಣಿಜ್ಯ ಸಂಸ್ಥೆಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಇತರ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಬೆಲೆ ಇಳಿಕೆ ಬಳಿಕ ದೆಹಲಿಯಲ್ಲಿ 1,723.50 ರೂ, ಕೋಲ್ಕತ 1,826 ರೂ., ಮುಂಬೈ 1,674.50, ಚೆನ್ನೈ 1,881, ಬೆಂಗಳೂರು 1820.50 ರೂಪಾಯಿ ಇದೆ.



