Connect with us

Dvgsuddi Kannada | online news portal | Kannada news online

ಹೊಸ ವರ್ಷದಿಂದ ಎಟಿಎಂ ಹಣ ಡ್ರಾ ದುಬಾರಿ  

ಪ್ರಮುಖ ಸುದ್ದಿ

ಹೊಸ ವರ್ಷದಿಂದ ಎಟಿಎಂ ಹಣ ಡ್ರಾ ದುಬಾರಿ  

ನವದೆಹಲಿ: ಹೊಸ ವರ್ಷದಲ್ಲಿ ಠೇವಣಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಜನವರಿಯಿಂದ ಗ್ರಾಹಕರು ಉಚಿತ ಎಟಿಎಂ ವಹಿವಾಟಿನ ಮಿತಿ  ದಾಟಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

ಜೂನ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(RBI)  ಜ.01 2022 ರಿಂದ ಜಾರಿಗೆ ಬರುವಂತೆ ಎಟಿಎಂಗಳಿಂದ ಉಚಿತ ಮಾಸಿಕ ಹಿಂಪಡೆಯುವಿಕೆಯ ಮಿತಿಯ ನಂತರ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ. ಹೀಗಾಗಿ ಮೆಟ್ರೋ ನಗರಗಳಲ್ಲಿ, ಇತರ ಬ್ಯಾಂಕ್ ಗಳ ಎಟಿಎಂಗಳಿಂದ 3 ಬಾರಿ ಎಟಿಎಂ ಸೇವೆಯನ್ನು ಪಡೆಯಬಹುದು. ಮೆಟ್ರೋ ನಗರವಲ್ಲ ಕಡೆ  5 ಬಾರಿ ಹಣ ಪಡೆಯಬಹುದಾಗಿದೆ. ಜನವರಿ 1 ರಿಂದ ಉಚಿತ ಮಿತಿಯ ನಂತರ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಉಚಿತ ಮಿತಿಗಿಂತ ಹೆಚ್ಚಿನ ಹಣಕಾಸಿನ ವಹಿವಾಟುಗಳು 21 ರೂ. ಮತ್ತು ಜಿಎಸ್‌ಟಿ ಪಾವತಿಸಬೇಕಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top