Connect with us

Dvgsuddi Kannada | online news portal | Kannada news online

ಜನವರಿಯಿಂದ ಪ್ರತಿ ವಾರ ಗ್ಯಾಸ್ ಸಿಲಿಂಡರ್ ದರ ಪರಿಷ್ಕರಣೆಗೆ ನಿರ್ಧಾರ

ರಾಷ್ಟ್ರ ಸುದ್ದಿ

ಜನವರಿಯಿಂದ ಪ್ರತಿ ವಾರ ಗ್ಯಾಸ್ ಸಿಲಿಂಡರ್ ದರ ಪರಿಷ್ಕರಣೆಗೆ ನಿರ್ಧಾರ

ನವದೆಹಲಿ:  ಮುಂದಿನ ಜನವರಿಯಿಂದ ಪ್ರತಿವಾರ ಗ್ಯಾಸ್ ಸಿಲಿಂಡರ್ ದರ ಪರಿಷ್ಕರಣೆ ಮಾಡಲು ತೈಲ ಕಂಪೆನಿಗಳು ನಿರ್ಧರಿಸಿವೆ. ಇದಕ್ಕೂ ಮುನ್ನ ಗ್ಯಾಸ್ ಸಿಲಿಂಡರ್‍ಗಳ ಬೆಲೆಯನ್ನು ಪ್ರತಿ ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡುವ ಪದ್ಧತಿ ಜಾರಿಯಲ್ಲಿದೆ. ಇದೀಗ ಪ್ರತಿ ವಾರಕ್ಕೊಮ್ಮೆ ದರ ಪರಿಷ್ಕರಣೆಗೆ ನಿರ್ಧರಿಸಲಾಗಿದೆ.

ಪೆಟ್ರೋಲ್, ಡಿಸೇಲ್ ಬೆಲೆಯ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪರಿಷ್ಕರಣೆ ಮಾಡಲಾಗುತ್ತದೆ. ಆಯಾ ದಿನದ ಆರು ಗಂಟೆ ಬಳಿಕ ಪರಿಷ್ಕರಣೆಯಾಗುವ ದರವನ್ನು ಗ್ರಾಹಕರು ನೀಡಬೇಕಿದೆ. ಒಂದು ವೇಳೆ  ತಿಂಗಳ ಒಳಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದರೆ ಅದರಿಂದಾಗುವ ನಷ್ಟವನ್ನು ತೈಲ ಕಂಪೆನಿಗಳು ತಿಂಗಳು ಪೂರ್ತಿಯಾಗಿ ಭರಿಸಬೇಕಿದೆ. ಹೀಗಾಗಿ ಇಂತಹ ಮಹತ್ವದ ಬದಲಾವಣೆ ಮಾಡಲು ತೈಲ ಕಂಪೆನಿಗಳು ನಿರ್ಧರಿಸಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಏರಿಳಿಕೆಯಾಗುತ್ತಿದೆ. ಅದನ್ನು ದರ ಏರಿಕೆ ಅಥವಾ ಇಳಿಕೆ ಮಾಡಲು ನಿರ್ಧರಿಸಲಾಗಿದೆ.  ಇನ್ಮುಂದೆ  ಪ್ರತಿವಾರ ಗ್ಯಾಸ್ ಬಳಕೆದಾರರಿಗೆ ಟೆನ್ಷನ್ ತಪ್ಪಿದ್ದಲ್ಲ. ಪೆಟ್ರೋಲ್, ಡಿಸೇಲ್ ದರವನ್ನು ಪ್ರತಿದಿನ ಪರಿಷ್ಕರಣೆ ಮಾಡುವ ಪದ್ಧತಿ ಜಾರಿಗೆ ಬಂದ ಬಳಿಕ ಬಹುತೇಕ ದರ ದುಪ್ಪಟ್ಟು ಏರಿಕೆಯಾಗಿದೆ. ಡಿಲರ್ ಕಮಿಷನ್ ಮತ್ತು ಅಬಕಾರಿ ಸುಂಕ ಸೇರ್ಪಡೆಯಾಗಿರುವುದರಿಂದ ಪೆಟ್ರೋಲ್ ಡಿಸೇಲ್ ದರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಇನ್ಮುಂದೆ ಗ್ಯಾಸ್ ಬಳಕೆದಾರರು ಕೂಡ ಪ್ರತಿ ವಾರ ಟೆನ್ಷನ್ ಅನುಭವಿಸುವಂತಾಗಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top