Connect with us

Dvgsuddi Kannada | online news portal | Kannada news online

ನೈಟ್ ಕರ್ಫ್ಯೂ ಜಾರಿ: ಬಸ್ ಸಂಚಾರ ಇರಲ್ಲ; ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಬ್ರೇಕ್  

ಪ್ರಮುಖ ಸುದ್ದಿ

ನೈಟ್ ಕರ್ಫ್ಯೂ ಜಾರಿ: ಬಸ್ ಸಂಚಾರ ಇರಲ್ಲ; ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಬ್ರೇಕ್  

ಬೆಂಗಳೂರು : ರಾಜ್ಯದಲ್ಲಿ ಕೋವಿಡ್-19 ಹೊಸ ರೂಪಾಂತರದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇಂದು ರಾತ್ರಿಯಿಂದಲೇ ಜನವರಿ 2ರವರೆಗೆ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ ಎಂದು  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸಲಾಗುತ್ತಿದೆ. ಹೀಗಾಗಿ ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಂತಾಗಿದೆ. ಇನ್ನು ಬಸ್ ಸಂಚಾರವೂ ಬಂದ್ ಆಗಿಲಿದೆ.

  • ಏನು ಇರಲಿದೆ…?
  • ತುರ್ತು ಸೇವೆ, ಆಸ್ಪತ್ರೆ, ವೈದ್ಯಕೀಯ ಸೇವೆ, ಮೆಡಿಕಲ್ ಶಾಪ್ ಸೇರಿದಂತೆ ಅಗತ್ಯ ಸೇವೆಗೆ ಅವಕಾಶ
  • ಏನು ಇರಲ್ಲ..?
  • ಪಬ್, ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್, ಸಾರಿಗೆ ಸಂಚಾರ ವ್ಯವಸ್ಥೆ ಸೇರಿದಂತೆ ಇತರೆ ಸೇವೆಗಳು ಬಂದ್

 

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡೆಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಇಂದು ರಾತ್ರಿ  ಜನವರಿ 2ರವರೆಗೆ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸಲಾಗುತ್ತಿದೆ. ಕೋವಿಡ್ 19 ಹೊಸ ರೂಪಾಂತರದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ  ಎಂದು ಘೋಷಣೆ ಮಾಡಿದರು.

ಬ್ರಿಟನ್ ನಿಂದ ಬರುವಂತವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ರಾಜ್ಯಕ್ಕೆ ಬ್ರಿಟನ್ ನಿಂದ  ಬಂದವರನ್ನು ಪತ್ತೆ ಹಚ್ಚಿ, ಸೋಂಕು ಪತ್ತೆಗಾಗಿ ಆರ್ ಟಿ-ಪಿಸಿಆರ್  ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೊರೊನಾ ರೂಪಾಂತರದ ಅಲೆಯ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಈ  ಬಗ್ಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಬ್ರಿಟನ್ ನಿಂದ ವಿಮಾನಗಳಲ್ಲಿ ಎರಡೂವರೆ ಸಾವಿರ ಜನ ಬಂದಿದ್ದಾರೆ. ಅವರನ್ನು ಆರ್ ಟಿ – ಪಿಸಿಆರ್ ಮೂಲಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ .ಕೊರೊನಾ ರೂಪಾಂತರ ಬಗ್ಗೆ  ಮುಂಜಾಗ್ರತಾ ಕ್ರಮ, ನೈಟ್ ಕರ್ಪ್ಯೂ  ಬಗ್ಗೆ ಸಂಜೆಯೊಳಗೆ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top