Connect with us

Dvgsuddi Kannada | online news portal | Kannada news online

ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್ ಗೆ ಐಟಿ ಬಿಗ್ ​ ಶಾಕ್​; 1000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ

ದಾವಣಗೆರೆ

ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್ ಗೆ ಐಟಿ ಬಿಗ್ ​ ಶಾಕ್​; 1000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ

ನವದೆಹಲಿ: ಮಹಾರಾಷ್ಟ್ರದ  ಡಿಸಿಎಂ ಅಜಿತ್ ಪವಾರ್ ​ ಐಟಿ ಬಿಗ್ ಶಾಕ್ ನೀಡಿದ್ದು,  1000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಂದು ಆದಾಯ ತೆರಿಗೆ ಇಲಾಖೆ (Income Tax Department) ಜಪ್ತಿ ಮಾಡಿದೆ.

ಬೇನಾಮಿ ಆಸ್ತಿ ಹಿನ್ನೆಲೆ ಆದಾಯ ತೆರಿಗೆ ಇಲಾಖೆ  ಅಜಿತ್​ ಪವಾರ್​ಗೆ ನೋಟಿಸ್​ ಕೂಡ ನೀಡಿದೆ. ದಕ್ಷಿಣ ದೆಹಲಿಯಲ್ಲಿರುವ 20 ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾಟ್​, ಅಜಿತ್ ಪವಾರ್​ ಪುತ್ರ ಪಾರ್ಥ ಅವರಿಗೆ ಸೇರಿದ, ನಿರ್ಮಲ್​  ಹೌಸ್​​ನಲ್ಲಿರುವ ಸುಮಾರು 25 ಕೋಟಿ ರೂ.ಬೆಲೆಯ ಕಚೇರಿ, ಜರಂದೇಶ್ವರದಲ್ಲಿ ಇರುವ ಸುಮಾರು 600 ಕೋಟಿ ರೂ.ಮೌಲ್ಯದ ಸಕ್ಕರೆ ಕಾರ್ಖಾನೆ, 250 ಕೋಟಿ ರೂ.ಬೆಲೆಯ ಗೋವಾದಲ್ಲಿರುವ ಒಂದು ರೆಸಾರ್ಟ್ ಮತ್ತು ಮಹಾರಾಷ್ಟ್ರದ ವಿವಿಧ 27 ಪ್ರದೇಶಗಳಲ್ಲಿರುವ 500 ಕೋಟಿ ರೂ.ಮೌಲ್ಯದ ಭೂಮಿಯನ್ನು ಬೇನಾಮಿ ಆಸ್ತಿ ಎಂದು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.

90 ದಿನಗಳಲ್ಲಿ ಅಜಿತ್​ ಪವಾರ್​ ಇದು ಬೇನಾಮಿ ಅಲ್ಲ ಎಂಬುದನ್ನು ಸಾಬೀತು ಪಡಿಸಬೇಕು. ಅಷ್ಟೂ ಆಸ್ತಿಯ ಕಾನೂನು ಬದ್ಧ ದಾಖಲೆಗಳನ್ನು ಸಲ್ಲಿಸಬೇಕು.  ಐಟಿ ಇಲಾಖೆಯ ತನಿಖೆ, ವಿಚಾರಣೆ ಮುಗಿಯುವವರೆಗೂ ಅವರು ಈ ಆಸ್ತಿಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ಅಜಿತ್​ ಪವಾರ್ ಕುಟುಂಬಕ್ಕೆ ಸೇರಿದ ಎರಡು ರಿಯಲ್​ ಎಸ್ಟೇಟ್​​ ಗ್ರೂಪ್​​​ನಲ್ಲಿ ಶೋಧ ನಡೆಸಿತ್ತು. ಈ ವೇಳೆ 184 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿತ್ತು. ಅದಕ್ಕೆ ಸಂಬಂಧಪಟ್ಟಂತೆ ಅಕ್ಟೋಬರ್​ 7ರಂದು 70 ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿತ್ತು

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top