ಮುಂಬೈ: ಭಾರೀ ಮಳೆಯಿಂದ ತತ್ತರಿಸಿದ ಮಹಾರಾಷ್ಟದ ಜನರಿಗೆ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ 10,000 ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ್ದು, ರೈತರಿಗೆ ಬೆಳೆ ಹಾನಿ ಪರಿಹಾರವಾಗಿ ಪ್ರತಿ ಹೇಕ್ಟರ್ ಗೆ 10 ಸಾವಿರ ರೂಪಾಯಿ ನೀಡಲಿದ್ದಾರೆ.
ಈ ಬಾರಿಯ ಭಾರೀ ಪ್ರಮಾಣದ ಮುಂಗಾರು ಮಳೆಯಿಂದಾಗಿ ರಾಜ್ಯದಲ್ಲಿ ಬೆಳೆ ನಷ್ಟ, ಜೀವಹಾನಿ ಹಾಗೂ ಮನೆ, ಕಟ್ಟಡಗಳು, ರಸ್ತೆಗಳಿಗೆ ಆಗಿದ್ದವು. ಹಾನಿಯ ಪ್ರದೇಶಕ್ಕೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇತ್ತೀಚೆಗಷ್ಟೇ ಪರಿಶೀಲನೆ ನಡೆಸಿದ್ದರು. ಇದೀಗ ಮಹಾರಾಷ್ಟ್ರ ಸರ್ಕಾರ 10,000 ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ್ದು, ಪಶ್ಚಿಮ ಮತ್ತು ಮಧ್ಯ ಭಾಗದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದೆ. ಪರಿಹಾರ ಮೊತ್ತ ದೀಪಾವಳಿಗೂ ಮುನ್ನವೇ ವಿತರಣೆಯಾಗಲಿದೆ ಎಂದು ಉದ್ಧವ್ ಠಾಕ್ರೆ ಘೋಷಿಸಿದ್ದಾರೆ.
Instead of Rs 6800 per hectare help to farmers, we're increasing it to Rs 10000 per hectare. I will also urge the Centre to do the same. Till now, we have given approximately Rs 3800 crores help to disaster-affected people: Maharasthra CM Uddhav Thackeray https://t.co/QVZ8CSJuVV
— ANI (@ANI) October 23, 2020
ಸೋಲಾಪುರ್, ಸಾಂಗ್ಲಿ, ಕೋಲ್ಹಾಪುರ್, ಸತಾರಾ, ಉಸ್ಮಾನಾಬಾದ್, ಬೀಡ್, ಔರಂಗಬಾದ್ ಹಾಗೂ ಲಾತುರ್‌ನಲ್ಲಿ ತೀವ್ರ ಮಳೆಯಿಂದ ಹಾನಿಯಾಗಿದ್ದು, ಸೋಯಾ ಬೀನ್, ಹತ್ತಿ, ಕಬ್ಬು, ದಾಳಿಂಬೆ ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿವೆ. ಶೀಘ್ರದಲ್ಲಿಯೇ ಪರಿಹಾರ ಬಿಡುಗಡೆ ಮಾಡುವಂತೆ ಸರ್ಕಾರ ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದೆ.