Connect with us

Dvgsuddi Kannada | online news portal | Kannada news online

ಮತ್ತೆ ಅಡುಗೆ ಅನಿಲ ಸಿಲಿಂಡರ್  ದರ ಏರಿಕೆ;  ಪ್ರತಿ ಸಿಲಿಂಡರ್ ಬೆಲೆ 15 ರೂಪಾಯಿ ಎಚ್ಚಳ

ಪ್ರಮುಖ ಸುದ್ದಿ

ಮತ್ತೆ ಅಡುಗೆ ಅನಿಲ ಸಿಲಿಂಡರ್  ದರ ಏರಿಕೆ;  ಪ್ರತಿ ಸಿಲಿಂಡರ್ ಬೆಲೆ 15 ರೂಪಾಯಿ ಎಚ್ಚಳ

ನವದೆಹಲಿಪೆಟ್ರೋಲಿಯಂ ಕಂಪೆನಿಗಳು ಇಂಧನ ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ಇದೀಗ ಅಡುಗೆ ಅನಿಲ ಸಿಲಿಂಡರ್ ದರವನ್ನು ಕೂಡ 15 ರೂಪಾಯಿ ಏರಿಕೆಯಾಗಿದೆ.  ನೂತನ ದರ ದೇಶಾದ್ಯಂತ ಇಂದಿನಿಂದಲೇ (ಅ. 06)  ಜಾರಿಗೆ ಬರಲಿದೆ.

ಈ ಮೂಲಕ ಸಬ್ಸಿಡಿಯೇತರ ಅಡುಗೆ ಅನಿಲ ಸಿಲಿಂಡರ್ ದರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿಗೆ 899 ರೂಪಾಯಿ 50 ಪೈಸೆಯಾಗಿದೆ. 5 ಕೆಜಿ ಸಿಲಿಂಡರ್ ಬೆಲೆ 502 ರೂಪಾಯಿಯಾಗಿದೆ. ಅಕ್ಟೋಬರ್ 1ರಂದು ಪೆಟ್ರೋಲಿಯಂ ಕಂಪೆನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 43 ರೂಪಾಯಿ 5 ಪೈಸೆಯಷ್ಟು ಹೆಚ್ಚಳ ಮಾಡಿದ್ದವು. ಇದೀಗ ಅಡುಗೆ ಅನಿಲ ಸಿಲಿಂಡರ್ ದರವನ್ನು ಕೂಡ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಶಾಕ್ ನೀಡಿದೆ. ಕಳೆದ ಎರಡು ತಿಂಗಳಲ್ಲಿ ಅಡುಗೆ ಅನಿಲ ಏರಿಕೆಯಾಗುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ.

ಪೆಟ್ರೋಲಿಯಂ ಕಂಪನಿಗಳು ಸಬ್ಸಿಡಿ ರಹಿತ 14.2 ಕೆಜಿ ಗ್ಯಾಸ್ ಸಿಲಿಂಡರ್ ದರವನ್ನು ಹೆಚ್ಚಿಸಿವೆ. ಈ ಹೆಚ್ಚಳದ ನಂತರ, ಈಗ ದೆಹಲಿಯಲ್ಲಿ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ 899.5 ರೂ., ಮುಂಬೈ  899.5 ರೂ., ಕೋಲ್ಕತ್ತಾದಲ್ಲಿ 926 ರೂ.,  ಚೆನ್ನೈನಲ್ಲಿ 915.5 ರೂ.ಗೆ ಏರಿಕೆಯಾಗಿದೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top