ಬೆಂಗಳೂರು: ಹೊಸವರ್ಷದ ಮೊದಲ ದಿನವೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ (LPG cylinder) ಬೆಲೆಯಲ್ಲಿ 111 ರೂಪಾಯಿ ಹೆಚ್ಚಳವಾಗಿದೆ. ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ದಾವಣಗೆರೆ: ಜ.9ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ
19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ, ಹೋಟೆಲ್-ರೆಸ್ಟೋರೆಂಟ್ ದರ ಮೇಲೆ ಪರಿಣಾಮ ಬೀರಲಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಇದೀಗ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನ ಹೆಚ್ಚಳ ಮಾಡಿದ್ದು, ರೆಸ್ಟೋರೆಂಟ್, ಹೋಟೆಲ್ ಮತ್ತು ಇತರ ಅಡುಗೆ ಉದ್ಯಮಗಳ ಮೇಲೆ ನೇರ ಪರಿಣಾಮ ಬೀರಲಿದ್ದು, ಮುಂದಿನ ದಿನಗಳಲ್ಲಿ ಹೋಟೆಲ್ ತಿಂಡಿ-ತಿನಿಸುಗಳ ದರ ಹೆಚ್ಚಳ ಆಗಬಹುದು.
ದಾವಣಗೆರೆ: ಕೆಎಸ್ ಆರ್ ಟಿಸಿ ವೋಲ್ವೋ, ಇ.ವಿ. ಪವರ್ ಪ್ಲಸ್, ನಾನ್ ಎಸಿ ಸ್ಲೀಪರ್ ಬಸ್ ದರ ಇಳಿಕೆ
ಏರಿಕೆ ಬಳಿಕ ಯಾವ ನಗರಗಳಲ್ಲಿ ಎಷ್ಟಿದೆ..?
19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 111 ರೂಪಾಯಿ ಹೆಚ್ಚಳ ಬಳಿಕ ದೆಹಲಿಯಲ್ಲಿ ಸಿಲಿಂಡರ್ ದರ 1580 ರೂ.ಗಳಿಂದ 1691.50 ರೂಪಾಯಿ ಆಗಿದೆ. 2025ರ ಜೂನ್‌ನಿಂದ ಇಲ್ಲಿಯವರೆಗಿನ ಗರಿಷ್ಠ ಮೊತ್ತ ಇದಾಗಿದೆ. ಇನ್ನು ಕೋಲ್ಕತ್ತದಲ್ಲಿ 1795 ರೂ., ಮುಂಬೈನಲ್ಲಿ 1642.50 ರೂಪಾಯಿ ಮತ್ತು ಚೆನ್ನೈನಲ್ಲಿ 1849.50 ರೂಪಾಯಿ ಆಗಿದೆ. ಇನ್ನು ಬೆಂಗಳೂರಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರ 1654 ರೂಪಾಯಿಗೆ ಏರಿಕೆಯಾಗಿದೆ. ಸದ್ಯ ಗೃಹಬಳಕೆ ಸಿಲಿಂಡರ್‌ಗಳ ಬೆಲೆ 855ರೂ.ದಿಂದ 960ರ ಮಧ್ಯೆ ಇದೆ. ಬೆಂಗಳೂರಲ್ಲಿ 855 ರೂಪಾಯಿ ಇದೆ.



