Connect with us

Dvgsuddi Kannada | online news portal | Kannada news online

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ಸುದ್ದಿ

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

 ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‍ನ (ಐಒಸಿಎಲ್) ವಿವಿಧ ಪ್ರಾದೇಶಿಕ ಕಚೇರಿಗಳ ಪೈಪ್‍ಲೈನ್ ವಿಭಾಗಗಳ 47 ಟೆಕ್ನಿಕಲ್ ಅಟೆಂಡೆಂಟ್ ಮತ್ತು ಇಂಜಿನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಅಸ್ಸಾಂ, ಬಿಹಾರ್, ಜಾರ್ಖಂಡ್, ಹರಿಯಾಣ, ಪಂಜಾಬ್, ಹಿಮಾಚಲಪ್ರದೇಶ, ಛತ್ತೀಸ್‍ಗಢ, ಒಡಿಶಾ, ಗುಜರಾತ್ ಹಾಗೂ ರಾಜಸ್ಥಾನಗಳ ಪ್ರಾದೇಶಿಕ ಕಚೇರಿಗಳಲ್ಲಿ ಉದ್ಯೋಗಾವಕಾಗಳಿವೆ. ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 31, ಎಸ್ಸಿಗೆ 7, ಎಸ್‍ಟಿಗೆ 4, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 4, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 1 ಅಂಗವಿಕಲರಿಗೆ 1, ಮಾಜಿ ಸೈನಿಕರಿಗೆ 4 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

 ವಿವಿಧ ಹುದ್ದೆಗಳು
– ಇಂಜಿನಿಯರಿಂಗ್ ಅಸಿಸ್ಟೆಂಟ್
– ಮೆಕ್ಯಾನಿಕಲ್
– ಎಲೆಕ್ಟ್ರಿಕಲ್
– ಟ್ರಾನ್ಸ್‌ಪೋರ್ಟೇಷನ್ ಆಯಂಡ್ ಇನ್‍ಸ್ಟಾಲೇಷನ್
– ಆಪರೇಷನ್ಸ್
– ಟೆಕ್ನಿಕಲ್ ಅಟೆಂಡೆಂಟ್
– ಎಲೆಕ್ಟ್ರಿಷಿಯನ್
– ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್
– ಫಿಟ್ಟರ್
– ಇನ್‍ಸ್ಟ್ರುಮೆಂಟ್ ಮೆಕ್ಯಾನಿಕ್
– ಮೆಷಿನಿಸ್ಟ್/ ಮೆಷಿನಿಸ್ಟ್ (ಗ್ರೈಂಡರ್)
– ಮೆಕ್ಯಾನಿಕ್ ಕಂ ಆಪರೇಟರ್ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಸಿಸ್ಟಂ
– ಟರ್ನರ್
– ವೈರ್‍ಮೆನ್
– ಡ್ರಾಟ್ಸ್‍ಮನ್ (ಮೆಕ್ಯಾನಿಕಲ್)
– ಮೆಕ್ಯಾನಿಕ್ (ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್, ರೆಫ್ರಿಜರೇಟರ್ ಆಯಂಡ್ ಏರ್‍ಕಂಡಿಷನರ್, ಡಿಸೇಲ್)
– ಇನ್ಫೋರ್ಮೇಷನ್‌ ಟೆಕ್ನಾಲಜಿ ಆಯಂಡ್ ಇಎಸ್‍ಎಂ

3 ವರ್ಷಗಳ ಪೂರ್ಣಾವಧಿಯ ಡಿಪ್ಲೋಮಾ/ 2 ವರ್ಷಗಳ ಐಟಿಐ ನಂತರ ಒಂದು ವರ್ಷದ ಡಿಪ್ಲೋಮಾ, ಹುದ್ದೆಗೆ ಅನುಗುಣವಾಗಿ ಇಂಜಿನಿಯರಿಂಗ್ ಪದವಿ, ಎಸ್ಸೆಸ್ಸೆಲ್ಸಿ ನಂತರ ಹುದ್ದೆಗೆ ಅನುಗುಣವಾಗಿ ಐಟಿಐ ಕೋರ್ಸ್. ಕನಿಷ್ಠ ಶೇ.55 ಅಂಕ ಗಳಿಸಿರಬೇಕು.

22.12.2020ಕ್ಕೆ ಕನಿಷ್ಠ 18 ವರ್ಷ, ಗರಿಷ್ಠ 26ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ. ಇಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗೆ ಮಾಸಿಕ 25,000 ರೂ.ನಿಂದ ಹಾಗೂ ಟೆಕ್ನಿಕಲ್ ಅಟೆಂಡೆಂಟ್‍ಗೆ ಮಾಸಿಕ 23,000 ರೂ.ನಿಂದ ವೇತನ ಇದ್ದು, ಡಿಎ, ಮನೆ ಬಾಡಿಗೆ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.

ಎಸ್‍ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳಿಗೆ 100 ರೂ. ಲಿಖಿತ ಪರೀಕ್ಷೆ, ಕೌಶಲ/ ಪ್ರಾವಿಣ್ಯತೆ/ ಭೌತಿಕ ಪರೀಕ್ಷೆ (ಎಸ್‍ಪಿಪಿಟಿ) ನಡೆಸಿ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ ಶೇ.40 ಅಂಕ ಪಡೆದಿರಬೇಕು. ಮೀಸಲಾತಿ ಅಭ್ಯರ್ಥಿಗಳು ಶೇ.30 ಅಂಕ ಪಡೆಯಬೇಕು. ಲಿಖಿತ ಪರೀಕ್ಷೆಯ ಸಂಭಾವ್ಯ ದಿನಾಂಕ 14.02.2021. ಅರ್ಜಿ ಸಲ್ಲಿಸಲು ಕೊನೇ ದಿನ: 15.1.2021 ಆಗಿದೆ.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top