ನವದೆಹಲಿ: ಹೊಸ ವರ್ಷದಿಂದ ಜನವರಿ 1 ರಿಂದ ಜಾರಿಗೆ ಬರುವಂತೆ ದೇಶದ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇದರಿಂದ ಪ್ರಯಾಣಿಕರಿಗೆ ಉಪಯೋಗವಾಗುತ್ತದೆ. ನಗದು ಪಾವತಿ, ಸಮಯ, ಇಂಧನ ಉಳಿತಾಯವಾಗಯತ್ತದೆ. ಅಲ್ಲದೇ, ಟೋಲ್ ಪ್ಲಾಜಾಗಳಲ್ಲಿ ನಿಲ್ಲುವ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ.
ಜನವರಿ 1 ರಿಂದ ಹಳೆಯ ವಾಹನಗಳು ಸೇರಿದಂತೆ ಎಲ್ಲಾ 4 ಚಕ್ರದ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಈ ನಿರ್ಧಾರವನ್ನು ಹಿಂದೆಯೇ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೈಗೊಂಡಿದೆ.
ಸಚಿವಾಲಯದಿಂದ ಫಾಸ್ಟ್ಯಾಗ್ ಗಳ ಮೂಲಕ ಡಿಜಿಟಲ್ ಮತ್ತು ಐಟಿ ಆಧಾರಿತ ಶುಲ್ಕವನ್ನು ಪಾವತಿಸಲು ಅಧಿಸೂಚನೆ ಹೊರಡಿಸಲಾಗಿದೆ. ಜನವರಿ 1ರಿಂದ ಹಳೆಯ ವಾಹನಗಳಲ್ಲಿಯೂ ಲಭ್ಯವಾಗುವಂತೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಸಾರಿಗೆ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಿದ ನಂತರವೇ ಫಿಟ್ನೆಸ್ ಪ್ರಮಾಣಪತ್ರದ ನವೀಕರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.