Connect with us

Dvgsuddi Kannada | online news portal | Kannada news online

ಜೂನ್ 01ರಿಂದ ಚಿನ್ನಾಭರಣ ಮೇಲೆ ಹಾಲ್ ಮಾರ್ಕ್ ಕಡ್ಡಾಯ 

ಪ್ರಮುಖ ಸುದ್ದಿ

ಜೂನ್ 01ರಿಂದ ಚಿನ್ನಾಭರಣ ಮೇಲೆ ಹಾಲ್ ಮಾರ್ಕ್ ಕಡ್ಡಾಯ 

ನವದೆಹಲಿ: ಭಾರತದ ಮಹಾಲೇಖಪಾಲಕರು(CAG)  ಸಲಹೆಯಂತೆ ಜೂನ್ 1 ರಿಂದ ಚಿನ್ನಾಭರಣಗಳ ಮೇಲೆ ಹಾಲ್‌ ಮಾರ್ಕ್ ಕಡ್ಡಾಯಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಗ್ರಾಹಕರ ಹಿತ ರಕ್ಷಿಸಲ, ಲೋಹದ ಪರಿಶುದ್ಧತೆ ಖಾತ್ರಿ ಪಡಿಸಲು ಹಾಲ್ ಮಾರ್ಕ್  ಕಡ್ಡಾಯವಾಗಬೇಕಿದೆ.  ಗ್ರಾಹಕ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿರುವ ಭಾರತೀಯ ಗುಣಮುಟ್ಟ ದಳ (Bureau of Indian Standards) ಅಧಿಕೃತವಾಗಿ ಹಾಲ್‌ಮಾರ್ಕ್ ನೀಡುವ ಅಧಿಕಾರವಿದೆ.

ಚಿನ್ನಾಭರಣಗಳ ಮೇಲೆ ಹಾಲ್‌ಮಾರ್ಕ್ ಕಡ್ಡಾಯಗೊಳಿಸದಿರುವುದರಿಂದ ಗ್ರಾಹಕರಿಗೆ ಮೋಸವಾಗುತ್ತಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ತಿಳಿಸಿತ್ತು. ಹೀಗಾಗಿ ಬಿಐಎಸ್ ಎಲ್ಲಾ ಉತ್ಪನ್ನಗಳ ಗುಣಮಟ್ಟ ಅಳೆಯುವ  ಸಂಸ್ಥೆಯಾಗಿದ್ದು, ಗ್ರಾಹಕರಿಗೆ ಗುಣಮಟ್ಟದ ಭರವಸೆಯನ್ನು ಕಡ್ಡಾಯಗೊಳಿಸುವ ಅಧಿಕಾರವನ್ನು ಈ ಸಂಸ್ಥೆಗೆ  ನೀಡಲಾಗಿದೆ.

34,647 ಆಭರಣ ಸಂಸ್ಥೆಗಳು ಈಗಾಗಲೇ ಬಿಐಎಸ್ ನಲ್ಲಿ ನೋಂದಣಿ ಮಾಡಿಕೊಂಡಿವೆ. ಶೇ 40ರಷ್ಟು ಮಾತ್ರ ಹಾಲ್ ಮಾರ್ಕ್ ಪಡೆಯಲು ಸಾಧ್ಯವಾಗಿದೆ.ಇನ್ಮುಂದೆ ಬಿಐಎಸ್ ನೋಂದಣಿ, ಹಾಲ್ ಮಾರ್ಕ್ ಇಲ್ಲದ ಆಭರಣಗಳಿಗೆ ಮಾನ್ಯತೆ ಇರುವುದಿಲ್ಲ. 14, 18 ಹಾಗೂ 22 ಕ್ಯಾರೆಟ್ ಚಿನ್ನಾಭರಣಗಳನ್ನು ಮಾತ್ರ ಮಾರಾಟ ಮಾಡಬಹುದು. ಅಪರಂಜಿ ಚಿನ್ನ ಮಾರಾಟಕ್ಕೆ ನೋಂದಣಿ, ಪರಿಶುದ್ಧತೆಯ ಮುದ್ರೆ ಕಡ್ಡಾಯವಾಗಲಿದೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top