Connect with us

Dvgsuddi Kannada | online news portal | Kannada news online

ನಾಳೆಯಿಂದ ಫಾಸ್ಟ್ಯಾಗ್ ಕಡ್ಡಾಯ; ಫಾಸ್ಟ್ಯಾಗ್ ಇಲ್ಲದಿದ್ದರೆ ಡಬಲ್ ಟೋಲ್ ..!

ಪ್ರಮುಖ ಸುದ್ದಿ

ನಾಳೆಯಿಂದ ಫಾಸ್ಟ್ಯಾಗ್ ಕಡ್ಡಾಯ; ಫಾಸ್ಟ್ಯಾಗ್ ಇಲ್ಲದಿದ್ದರೆ ಡಬಲ್ ಟೋಲ್ ..!

ನವದೆಹಲಿ: ನಾಳೆಯಿಂದ ಫಾಸ್ಟ್ಯಾಗ್​ ಕಡ್ಡಾಯವಾಗಿದ್ದು, ನಿಮ್ಮ ವಾಹನಗಳಿಗೆ ಫಾಸ್ಟ್ಯಾಗ್ ಇಲ್ಲವೆಂದ್ರೆ ಡಬಲ್​ ಟೋಲ್​ ಕಟ್ಟಲು ನೀವು ಸಿದ್ಧರಾಗಿ. ಏಕೆಂದರೆ ಕೇಂದ್ರ ಸರ್ಕಾರವು ಈ ಕುರಿತಾಗಿ ಹೊಸ ಆದೇಶವೊಂದನ್ನು ಪ್ರಕಟಿಸಿದ್ದು ಕಡ್ಡಾಯ ನಿಯಮ ಜಾರಿಗೆ ಮುಂದಾಗಿದೆ.

ನಾಳೆಯಿಂದಲೇ ಎಲ್ಲ ಹೆದ್ದಾರಿಗಳ ಟೋಲ್​ ಲೇನ್​ಗಳನ್ನು ಫಾಸ್ಟ್ಯಾಗ್​ ಲೇನ್​ಗಳಾಗಿ ಬದಲಾಯಿಸಲಾಗುವುದು. ಈಗಾಗಲೇ ಎಲ್ಲ ಟೋಲ್​ಗಳಲ್ಲಿ ಲೇನ್​ಗಳನ್ನು ಫಾಸ್ಟ್ಯಾಗ್​ ಲೇನ್​ಗಳಾಗಿ ಬದಲಾಗಿಸಲಾಗಿದ್ದು, ಕೇವಲ ಒಂದು ಲೇನ್​ನ್ನು ಫಾಸ್ಟ್ಯಾಗ್​ ಇಲ್ಲದವರಿಗಾಗಿ ಬಿಡಲಾಗಿತ್ತು. ಆದರೆ ಫೆಬ್ರವರಿ 15ರ ಮಧ್ಯ ರಾತ್ರಿಯಿಂದ ಎಲ್ಲ ಲೇನ್​ಗಳು ಫಾಸ್ಟ್ಯಾಗ್​ ಲೇನ್​ಗಳಾಗಿ ಕೆಲಸ ಮಾಡಲಿವೆ.

ಒಂದು ವೇಳೆ ನೀವು ಇನ್ನೂ ಫಾಸ್ಟ್ಯಾಗ್​ ಹಾಕಿಸಿಕೊಳ್ಳದಿದ್ದರೆ, ನಾಳೆ ಮಧ್ಯ ರಾತ್ರಿಯಿಂದ ಪ್ರತಿ ಟೋಲ್​ನಲ್ಲಿ ಟೋಲ್​ ಹಣದ ದುಪ್ಪಟ್ಟು ಹಣವನ್ನು ಶುಲ್ಕವನ್ನಾಗಿ ಕಟ್ಟಿ ಹೋಗಬೇಕಿದೆ.
ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಅನ್ವಯ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada ಡಿವಿಜಿಸುದ್ದಿ. ಕಾಂ ‌ಆನ್ ಲೈನ್ ನ್ಯೂಸ್ ಪೋರ್ಟಲ್‌ ಆಗಿದ್ದು, ಸ್ಥಳೀಯ (ದಾವಣಗೆರೆ) ಸುದ್ದಿ ಜೊತೆ ಇನ್ಫೋರ್ಮೆಟಿವ್ ಸುದ್ದಿ‌ ಕೊಡುವುದು ಮೊದಲ ಆದ್ಯತೆ. ಸ್ಥಳೀಯ ಸುದ್ದಿ, ರಾಜಕೀಯ, ಶಿಕ್ಷಣ, ಸಿನಿಮಾ, ಕ್ರೀಡೆ ಜೊತೆ ರೈತರಿಗೆ ಉಪಯುಕ್ತ ಮಾಹಿತಿ ನೀಡಲಾಗುವುದು. Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top