Connect with us

Dvgsuddi Kannada | online news portal | Kannada news online

ಡಿ. 25 ರಂದು ವಾಜಪೇಯಿ: ದಿ ಇಯರ್ಸ್‌ ದಟ್‌ ಚೇಂಜ್ಡ್‌ ಇಂಡಿಯಾ ಪುಸ್ತಕ ಬಿಡುಗಡೆ

ರಾಷ್ಟ್ರ ಸುದ್ದಿ

ಡಿ. 25 ರಂದು ವಾಜಪೇಯಿ: ದಿ ಇಯರ್ಸ್‌ ದಟ್‌ ಚೇಂಜ್ಡ್‌ ಇಂಡಿಯಾ ಪುಸ್ತಕ ಬಿಡುಗಡೆ

ನವದೆಹಲಿಮಾಜಿ ಪ್ರಧಾನಿ ಬಿಜೆಪಿಯ ಹಿರಿಯ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರ ರಾಜಕೀಯ ಚಿಂತನೆಗಳು ಹಾಗೂ ಸಾಧನೆ ಒಳಗೊಂಡ  ಪುಸ್ತಕ ವಾಜಪೇಯಿ: ದಿ ಇಯರ್ಸ್‌ ದಟ್‌ ಚೇಂಜ್ಡ್‌ ಇಂಡಿಯಾ ಡಿ.25 ರಂದು ಬಿಡುಗಡೆಯಾಗಲಿದೆ.

ಡಿ .25 ರಂದು ವಾಜಪೇಯಿ ಅವರ 96ನೇ ಜನ್ಮ ದಿನ ಪ್ರಯುಕ್ತ ಈ ಪುಸ್ತಕ ಬಿಡುಗಡೆಯಾಗಲಿದೆ.ಈ ಪುಸ್ತಕವನ್ನು ಶಕ್ತಿ ಸಿನ್ಹಾ ಬರೆದಿದ್ದಾರೆ. ವಾಜಪೇಯಿ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿನ್ಹಾ ಅವರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ  ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ಸಿನ್ಹಾ ಅವರು ಅಟಲ್‌ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್‌ ಆಫ್‌ ಪಾಲಿಸಿ ರಿಸರ್ಚ್ ಆಯಂಡ್ ಇಂಟರ್‌ನ್ಯಾಷನಲ್‌ ಸ್ಟಡೀಸ್‌ನ ಗೌರವ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಾಜಪೇಯಿ ಅವರನ್ನು ಜನರು ಬಹಳ ಗೌರವದಿಂದ ಸ್ಮರಿಸುತ್ತಾರೆ. ಆದರೆ, 1998ರಲ್ಲಿ ಮೈತ್ರಿ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗುವಾಗ ಅವರು ಎದುರಿಸಿದ ಕಷ್ಟಗಳ ಬಗ್ಗೆ ಜನರಿಗೆ.ಮೈತ್ರಿ ಸರ್ಕಾರ ಮುನ್ನಡೆಸಿಕೊಂಡು ಹೋಗುವ ಸಂದಿಗ್ಧ ಪರಿಸ್ಥಿತಿಯಿದ್ದರೂ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ಒಂದೆಡೆ ಅಣ್ವಸ್ತ್ರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದರೆ, ಮತ್ತೊಂದೆಡೆ ಪಾಕಿಸ್ತಾನಕ್ಕೆ ಸ್ನೇಹ ಹಸ್ತ ಚಾಚಿದರು. ಕಾರ್ಗಿಲ್‌ ಯುದ್ಧವನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ಶಕ್ತಿ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

Advertisement

ದಾವಣಗೆರೆ

Advertisement
To Top