Connect with us

Dvgsuddi Kannada | online news portal | Kannada news online

ಎಲೆಕ್ಟ್ರಿಕ್ ಕಾರು ಖರೀದಿಸಿದರೆ, ಸಿಗಲಿದೆ 3 ಲಕ್ಷದ ವರೆಗೆ ರಿಯಾಯತಿ

ಪ್ರಮುಖ ಸುದ್ದಿ

ಎಲೆಕ್ಟ್ರಿಕ್ ಕಾರು ಖರೀದಿಸಿದರೆ, ಸಿಗಲಿದೆ 3 ಲಕ್ಷದ ವರೆಗೆ ರಿಯಾಯತಿ

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರ್ ಖರೀದಿ ಮಾಡಿದ್ರೆ ಬಂಪರ್ ಆಫರ್ ಸಿಗಲಿದೆ .  ಎಲೆಕ್ಟ್ರಿಕ್ ಕಾರು ಖರೀದಿಸಿದ್ರೆ ನಿಮಗೆ ಸಿಗಲಿದೆ  3 ಲಕ್ಷ ರೂಪಾಯಿವರೆಗೆ ರಿಯಾಯಿತಿ.  ಎಲೆಕ್ಟ್ರಾನಿಕ್ ವಾಹನಗಳ ಖರೀದಿ ಉತ್ತೇಜಿಸಲು ದೆಹಲಿ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗಾಗಿ ಸ್ವಿಚ್ ದೆಹಲಿ ಅಭಿಯಾನ ಆರಂಭಿಸಿದೆ.

ದೆಹಲಿ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ 1.5 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಿದೆ. ಜೊತೆ ರಸ್ತೆ ತೆರಿಗೆ ಮತ್ತು ಎಲೆಕ್ಟ್ರಿಕ್ ವಾಹನಗಳ ನೋಂದಣಿಯನ್ನು ಉಚಿತ ಮಾಡಿದೆ. ದೆಹಲಿಯಲ್ಲಿ ಪೆಟ್ರೋಲ್ ವಾಹನಗಳು ಕಡಿಮೆಯಾಗುವುದರ ಜೊತೆಗೆ ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ರಿಯಾಯಿತಿ ಘೋಷಿಸಿದೆ.

2024 ರ ವೇಳೆಗೆ ದೆಹಲಿಯಲ್ಲಿ ಮಾರಾಟವಾಗುವ ಹೊಸ ವಾಹನಗಳಲ್ಲಿ ಶೇಕಡಾ 25 ರಷ್ಟು ಎಲೆಕ್ಟ್ರಿಕ್ ವಾಹನಗಳಾಗುವ ಸಾಧ್ಯತೆಯಿದೆ ಎಂದು ಕೇಜ್ರಿವಾಲ್ ಸರ್ಕಾರ ಹೇಳಿದೆ. ದೆಹಲಿ ಸರ್ಕಾರ 2 ಮತ್ತು 3 ಚಕ್ರ ವಾಹನಗಳಿಗೆ 30,000 ರೂಪಾಯಿ ಸಬ್ಸಿಡಿ ನೀಡಲು ನಿರ್ಧರಿಸಿದೆ. ಎಲೆಕ್ಟ್ರಿಕ್ ಕಾರುಗಳಿಗೆ 1.5 ಲಕ್ಷ ರೂಪಾಯಿವರೆಗೆ ರಿಯಾಯಿತಿ ನೀಡಲಾಗುವುದು.

ಟಾಟಾ ನೆಕ್ಸನ್ ಇವಿ ಖರೀದಿ ಮಾಡಿದ್ರೆ 3 ಲಕ್ಷಕ್ಕೂ ಹೆಚ್ಚು ರೂಪಾಯಿ ರಿಯಾಯಿತಿ ಸಿಗಲಿದೆ. ಎಕ್ಸ್ ಎಂ ಟ್ರಿಮ್‌ನಲ್ಲಿ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕ ರಿಯಾಯಿತಿ 1,40,500 ರೂಪಾಯಿ. ಎಕ್ಸ್‌ Z ಡ್ ರೂಪಾಂತರದಲ್ಲಿ 1,49,900 ರೂಪಾಯಿ ರಿಯಾಯಿತಿ ಸಿಗ್ತಿದೆ

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top