ನವದೆಹಲಿ: ಇದೇ ತಿಂಗಳ ಮೊದಲ ದಿನವೇ ಕಮರ್ಷಿಯಲ್ ಗ್ಯಾಸ್ (19 ಕೆಜಿ) ಸಿಲಿಂಡರ್ ಬೆಲೆ 41 ರೂ.ಇಳಿಕೆ ಮಾಡಿದ್ದ ಕೇಂದ್ರ ಸರ್ಕಾರ , ಈಗ ಗೃಹ ಬಳಕೆ ಅಡುಗೆ ಅನಿಲದ ಸಿಲಿಂಡರ್ (Domestic LPG cylinder) ಬೆಲೆಯನ್ನು (price hike ) ಹೆಚ್ಚಳ ಮಾಡಿದೆ. 14.2 ಕೆಜಿಯ ಪ್ರತಿ ಎಲ್ಪಿಜಿ ಸಿಲಿಂಡರ್ ಬೆಲೆ 50 ರೂ.ನಷ್ಟು ಹೆಚ್ಚಳ ಮಾಡಲಾಗಿದೆ ಎಂದು ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಕಟಿಸಿದ್ದಾರೆ.
ನಾಳೆಯೇ ದ್ವಿತೀಯ ಪಿಯುಸಿ ಫಲಿತಾಂಶ; ಈ ರೀತಿ ಚೆಕ್ ಮಾಡಿ
ಈ ದರ ಏರಿಕೆ ಸಾಮಾನ್ಯ ಬಳಕೆದಾರರಿಗೆ ಮಾತ್ರವಲ್ಲ, ಉಜ್ವಲ ಯೋಜನೆ ಫಲಾನುಭವಿಗಳಿಗೂ ಈ ಬೆಲೆ ಏರಿಕೆಯ ಬಿಸಿ ಮಟ್ಟಲಿದೆ. 14.2 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 803 ರೂ ಇದ್ದದ್ದು 853 ರೂಗೆ ಏರಿಕೆ ಆಗಲಿದೆ. ಉಜ್ವಲ ಸ್ಕೀಮ್ನ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ಎಲ್ಪಿಜಿ ಸಿಗುತ್ತದಾದರೂ ಅವರಿಗೂ ಕೂಡ 50 ರೂ ಏರಿಕೆ ಆಗಿದೆ. 503 ರೂ ಇದ್ದ ಬೆಲೆ 553 ರೂಗೆ ಹೆಚ್ಚಳ ಆಗುತ್ತಿದೆ. ಹೊಸ ಬೆಲೆ ಏರಿಕೆಯು ನಾಳೆಯಿಂದ (ಏ. 8) ಜಾರಿಗೆ ಬರುತ್ತದೆ.
ದಾವಣಗೆರೆ: ಅಡಿಕೆಗೆ ಮತ್ತೆ ಭರ್ಜರಿ ಬೆಲೆ; ಏ.7ರ ಕನಿಷ್ಠ, ಗರಿಷ್ಠ ರೇಟ್ ಎಷ್ಟಿದೆ..?
ಏಪ್ರಿಲ್ 1ರಂದು ವಾಣಿಜ್ಯ ಬಳಕೆಯ ಅನಿಲದ ಬೆಲೆಯನ್ನು ಇಳಿಸಲಾಗಿತ್ತು. 19 ಕೆಜಿ ಮತ್ತು 47.5 ಕೆಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ ಇಳಿಕೆ ಆಗಿತ್ತು. ಆದರೆ, ಇವತ್ತು ಎರಡೂ ಕಮರ್ಷಿಯಲ್ ಸಿಲಿಂಡರ್ ಬೆಲೆಗಳು ಹೆಚ್ಚಳಗೊಂಡಿವೆ. 19 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ ಸಿಲಿಂಡರ್ಗೆ 5:50 ರೂ ಹೆಚ್ಚಳ ಆಗಿದೆ. 47.5 ಕಿಲೋ ಸಿಲಿಂಡರ್ ಬೆಲೆ 13.50 ರೂನಷ್ಟು ಏರಿಕೆ ಆಗಿದೆ. 14.2 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 50 ರೂ ಏರಿಕೆ ಆಗುತ್ತಿದೆ. ಗೃಹಬಳಕೆಯ 5 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆಯೂ ಏರಿಕೆ ಆಗುತ್ತಿದೆ. ಆದರೆ, ಎಷ್ಟು ಎಂಬುದು ಮಾಹಿತಿ ಲಭ್ಯವಾಗಿಲ್ಲ.
ಈ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಏರಿಕೆ ಮಾಡುವ ನಿರ್ಧಾರ ಕೈಗೊಂಡಿದೆ.ತೈಲ ಕಂಪನಿಗಳ ಮೇಲೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂ. ಅಬಕಾರಿ ಸುಂಕವನ್ನು ಏರಿಕೆ ಮಾಡಿದೆ.



