Connect with us

Dvgsuddi Kannada | online news portal | Kannada news online

ದೆಹಲಿ: ಒಂದೇ ದಿನದಲ್ಲಿ 104 ಮಂದಿ ಸೋಂಕಿತರು ಸಾವು

ರಾಷ್ಟ್ರ ಸುದ್ದಿ

ದೆಹಲಿ: ಒಂದೇ ದಿನದಲ್ಲಿ 104 ಮಂದಿ ಸೋಂಕಿತರು ಸಾವು

ನವದೆಹಲಿ: ಕೊರೋನಾ ವೈರಸ್ ಸೋಂಕಿನ ಮೂರನೇ ಹಂತದ ಅಲೆ ಆರಂಭವಾಗಿದ್ದು, ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಬರೊಬ್ಬರಿ 104 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದು ಈ ವರೆಗಿನ ಗರಿಷ್ಠ ಸಾವಿನ ಪ್ರಮಾಣವಾಗಿದೆ. ಈ ಬಗ್ಗೆ ದೆಹಲಿ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ 7,053 ಹೊಸ ಸೋಂಕು ಪ್ರಕರಣಗಳು ದಾಖಲಾಗಿದೆ. ಅಂತೆಯೇ ನಿನ್ನೆ 104 ಮಂದಿ ಸೋಂಕಿತರು ಸಾವನ್ನಪ್ಪಿದ್ದು ಇದು ದೆಹಲಿಯಲ್ಲಿ ಗರಿಷ್ಠ ಸಾವಿನ ಪ್ರಮಾಣವಾಗಿದೆ. ಈ ಹಿಂದೆ ಜೂನ್ 16ರಂದು 93 ಮಂದಿ ಸೋಂಕಿತರು ಸಾವನ್ನಪ್ಪಿದ್ದರು. ಇದು ಈ ವರೆಗಿನ ಗರಿಷ್ಟ ಸಾವಿನ ಪ್ರಮಾಣವಾಗಿತ್ತು. ಇನ್ನು ದೆಹಲಿಯಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ಇದೀಗ 4,67,028ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಈಗಾಗಲೇ 4.16 ಲಕ್ಷ ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನು ದಿನ ನಿತ್ಯ ಸೋಂಕು ಪ್ರಕರಣಗಳ ಪತ್ತೆ ಪ್ರಮಾಣ ಶೇ.11.71ಕ್ಕೆ ಏರಿಕೆಯಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top
(adsbygoogle = window.adsbygoogle || []).push({});