Connect with us

Dvgsuddi Kannada | online news portal | Kannada news online

ದೇಶದಾದ್ಯಂತ ಕೊರೊನಾ ಲಸಿಕಾ ಅಭಿಯಾನಕ್ಕೆ ಪ್ರಧಾನಿ ಚಾಲನೆ; ಲಸಿಕೆ ಬಂದಿದೆ ಎಂದು ಮೈ ಮರೆಯಬೇಡಿ

ಪ್ರಮುಖ ಸುದ್ದಿ

ದೇಶದಾದ್ಯಂತ ಕೊರೊನಾ ಲಸಿಕಾ ಅಭಿಯಾನಕ್ಕೆ ಪ್ರಧಾನಿ ಚಾಲನೆ; ಲಸಿಕೆ ಬಂದಿದೆ ಎಂದು ಮೈ ಮರೆಯಬೇಡಿ

ದೆಹಲಿ: ದೇಶದಾಂತ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ವೇಳೆ ಪ್ರಧಾನಿ ಅವರು ಲಸಿಕೆ ಬಂದಿದೆ ಎಂದು ಕೊರೊನಾ ನಿಯಮ ಮರೆಯಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಯಾವುದೇ ಭಯ ಇಲ್ಲದೇ ಲಸಿಕೆ ಪಡೆಯಲು ಸಿದ್ಧರಾಗಿರಿ. ಮೊದಲ ಹಂತದಲ್ಲಿಯೇ ನಾವು 3 ಕೋಟಿ ಜನರಿಗೆ ಲಸಿಕೆ ನೀಡುತ್ತಿದ್ದೇವೆ. ಎರಡನೇ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ದೇಶದಲ್ಲಿ ಮೊದಲ ಬಾರಿಗೆ ಐತಿಹಾಸಿಕವಾಗಿ ಕೊರೊನಾ ಲಸಿಕೆ ಚುಚ್ಚುಮದ್ದು ನೀಡಿಕೆ ಅಭಿಯಾನದ ಅಂಗವಾಗಿ ರಾಷ್ಟ್ರವನ್ನುದ್ದೇಶಿ ಮಾತನಾಡಿದರು.  ಇಷ್ಟು ತಿಂಗಳ ಕಾಲ ದೇಶದ ಪ್ರತಿ ಮನೆಯಲ್ಲೂ ಕೊರೊನಾ ಲಸಿಕೆ ಯಾವಾಗ ಬರುತ್ತದೆ ಎಂಬ ಪ್ರಶ್ನೆ ಇತ್ತು. ಈಗ ಅತಿ ಕಡಿಮೆ ಅವಧಿಯಲ್ಲಿ 2 ಮೇಡ್​ ಇನ್​ ಇಂಡಿಯಾ ವ್ಯಾಕ್ಸಿನ್ ಅಭಿವೃದ್ಧಿಯಾಗಿದೆ. ಇಂದಿನಿಂದ ಎಲ್ಲಾ ರಾಜ್ಯಗಳಲ್ಲೂ ಲಸಿಕೆ ವಿತರಣೆ ಆರಂಭವಾಗಲಿದೆ. ಇಡೀ ದೇಶದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಹಗಲು ರಾತ್ರಿ ಶ್ರಮಿಸಿ ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದ ವಿಜ್ಞಾನಿಗಳಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವಾರಿಯರ್ಸ್‌ಗಳಿಗೆ ಕೊವಿನ್ ಡಿಜಿಟಲ್ ಪ್ಲಾಟ್‌ಫಾರಂ ಮೂಲಕ ಲಸಿಕೆ ನೀಡಿಕೆ ಉಚಿತವಾಗಿ ಲಸಿಕೆ ನೀಡಲಾಗುವುದು. 2 ಡೋಸ್ ಲಸಿಕೆ ಪಡೆಯುವುದು ಅವಶ್ಯಕವಾಗಿದ್ದು, ಮೊದಲ ಡೋಸ್ ಪಡೆದು 2ನೇ ಡೋಸ್ ಪಡೆಯದೇ ಇರಬಾರದು ಎಂದರು.ಭಾರತ ಈಗಾಗಲೇ 150 ದೇಶಗಳಿಗೆ ಔಷಧಗಳನ್ನು ಪೂರೈಸಿದೆ. ಈ ಕಾರಣಕ್ಕೆ ವಿಶ್ವದ ಬಡ ರಾಷ್ಟ್ರಗಳ ದೃಷ್ಟಿ ಭಾರತದ ಮೇಲಿವೆ ಎಂದ ಪ್ರಧಾನಿ ನರೇಂದ್ರ ಮೋದಿ,’ಲಸಿಕೆಯನ್ನು ಪಡೆಯಿರಿ, ಎಚ್ಚರಿಕೆಯಿಂದ ಇರಿ’ ಎಂದು ಕರೆ ಕೊಟ್ಟರು.

ದೇಶವೆಂದರೆ ಮಣ್ಣಲ್ಲ, ದೇಶವೆಂದರೆ ಮನುಷ್ಯರು: ತೆಲುಗು ಕವಿ ಗುರಜಾಡ ವೆಂಕಟ ಅಪ್ಪಾರಾವ್​ ಕವಿತೆ ‘ದೇಶವೆಂದರೆ ಮಣ್ಣಲ್ಲ, ದೇಶವೆಂದರೆ ಮನುಷ್ಯರು’ ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ಮಾನವೀಯತೆಯ ಹಿನ್ನೆಲೆಯಲ್ಲಿ ಲಸಿಕೆ ವಿತರಿಸಲಾಗುವುದು ಎಂದರು. ಮಾನವ ಇತಿಹಾಸದಲ್ಲಿ ಅನೇಕ ವಿಪತ್ತುಗಳು, ಯುದ್ಧ ಬಂದಿವೆ. ಆದರೆ, ಕೊರೊನಾವನ್ನು ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಕೊರೊನಾ ಭಾರತೀಯರನ್ನು ವಿಚಲಿತರನ್ನಾಗಿ ಮಾಡಿತ್ತು. ವಿಶ್ವದ ಇತರ ದೇಶಗಳು ಭಾರತದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದರು. ಆದರೆ ನಾವು, ಭಾರತದ ಸಾಮೂಹಿಕ ಶಕ್ತಿಯನ್ನು ಪರಿಚಯ ಮಾಡಿಕೊಟ್ಟೆವು ಎಂದು ಹೆಮ್ಮೆಯಿಂದ ಹೇಳಿದರು.

ದೇಶದಲ್ಲಿ ಜನತಾ ಕರ್ಫ್ಯೂ ಸಾರ್ವಜನಿಕರನ್ನು ಕೊರೊನಾ ಎದುರಿಸಲು ಮಾನಸಿಕವಾಗಿ ಸಿದ್ಧಪಡಿಸಿತ್ತು. ಲಾಕ್‌ಡೌನ್ ಘೋಷಿಸುವ ತೀರ್ಮಾನ ಅಷ್ಟೊಂದು ಸುಲಭವಾಗಿರಲಿಲ್ಲ. ಜನರ ಊಟ, ಅರ್ಥ ವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ ಎಂಬುದು ನಮ್ಮ ಗಮನದಲ್ಲಿತ್ತು. ಲಸಿಕೆ ಪಡೆದು’ನೀವು ಆರೋಗ್ಯವಾಗಿರಿ, ನಿಮ್ಮ ಕುಟುಂಬ ಆರೋಗ್ಯದಿಂದಿರಲಿ’ಎಂದು ಅವರು ದೇಶವಾಸಿಗಳಿಗೆ ಹಾರೈಸಿದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});