Connect with us

Dvgsuddi Kannada | online news portal | Kannada news online

ಕಾಂಗ್ರೆಸ್ ಕಚೇರಿ ಮೇಲೆ ಐಟಿ ದಾಳಿ 8.5 ಲಕ್ಷ ಪತ್ತೆ…!

ರಾಷ್ಟ್ರ ಸುದ್ದಿ

ಕಾಂಗ್ರೆಸ್ ಕಚೇರಿ ಮೇಲೆ ಐಟಿ ದಾಳಿ 8.5 ಲಕ್ಷ ಪತ್ತೆ…!

ಪಾಟ್ನಾ: ವಿಧಾನಸಭಾ  ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ಬಿಹಾರದ ಕಾಂಗ್ರೆಸ್ ಪ್ರಧಾನ ಕಚೇರಿ  ಮೇಲೆ ಆದಾಯ ತೆರಿಗೆ ಅಧಿಕಾರಿ(ಐಟಿ)ಗಳು ದಾಳಿ ನಡೆಸಿದ್ದು, ಕಚೇರಿಯ ಆವರಣದ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 8.5 ಲಕ್ಷ ರೂ.ಪತ್ತೆಯಾಗಿದೆ.

ಈ ದಾಳಿ ವೇಳೆ  ಕಾಂಗ್ರೆಸ್ ಕಾರ್ಯಕರ್ತ ಎನ್ನಲಾದ ಅಶುತೋಷ್ ಮತ್ತು ಕಾರಿನಲ್ಲಿದ್ದ ಲಕ್ಷ ರೂ.ಹಣವನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಿದೆ. ಈ ಕುರಿತು ಬಿಹಾರ್ ಕಾಂಗ್ರೆಸ್ ಇನ್‍ಚಾರ್ಜ್ ಶಕ್ತಿ ಸಿಂಗ್ ಗೋಹಿಲ್ ಹಾಗೂ ರಾಷ್ಟ್ರೀಯ ಮಿಡಿಯಾ ಇನ್‍ಚಾರ್ಜ್ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಐಟಿ ದಾಳಿಯನ್ನು ಶಕ್ತಿ ಸಿಂಗ್ ಗೋಹಿಲ್ ಅವರು ಖಂಡಿಸಿದ್ದು, ಕಾಂಗ್ರೆಸ್ ತಪ್ಪು ಮಾಡುತ್ತಿದೆ ಎಂಬುದನ್ನು ಬಿಂಬಿಸಲು ಈ ರೀತಿ ಮಾಡಲಾಗುತ್ತಿದೆ. ಬಿಜೆಪಿ-ಜೆಡಿಯು ಸರ್ಕಾರದ ಸೂಚನೆ ಮೇರೆಗೆ ಐಟಿ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.ಬಿಹಾರ ಚುನಾವಣೆಯಲ್ಲಿ ನಾವು ಸೋಲುತ್ತೇವೆ ಎಂಬುದು ಬಿಜೆಪಿ-ಜೆಡಿಯುಗೆ ತಿಳಿದಿದೆ. ಹೀಗಾಗಿ ಈ ರೀತಿಯ ಕೆಲಸ ಮಾಡುತ್ತಿದೆ. ಯಾರ ಕಾರಿನಿಂದ ಹಣ ವಶಪಡಿಸಿಕೊಳ್ಳಲಾಗಿದೆಯೋ ಅವರು ನಮಗೆ ಸಂಬಂಧವಿಲ್ಲ. ಹಣ ಹಾಗೂ ಕಾರು ಯಾರಿಗೆ ಸೇರಿದ್ದು ಎಂಬುದು ಸಹ ನಮಗೆ ತಿಳಿದಿಲ್ಲ ಎಂದಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top