ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್ (Commercial Cylinder) ದರ ಇಳಿಕೆ ಮಾಡಿದ್ದು, ತಿಂಗಳ ಮೊದಲ ದಿನವೇ 19 ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ 41 ರೂ.ಗಳಷ್ಟು ಇಳಿಕೆಯಾಗಿದೆ.
ದಾವಣಗೆರೆ: ಮುಖ್ಯಮಂತ್ರಿ ಪದಕಕ್ಕೆ ಜಿಲ್ಲೆಯ12 ಪೊಲೀಸ್ ಅಧಿಕಾರಿಗಳು ಆಯ್ಕೆ
ಇಂದಿನಿಂದಲೇ ಜಾರಿಗೆ ಬರುವಂತೆ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 41 ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಪರಿಷ್ಕೃತ ದರ ಅನ್ವಯ 19 ಕೆ.ಜಿ ಸಿಲಿಂಡರ್ ಚಿಲ್ಲರೆ ಮಾರಾಟ ಬೆಲೆ 1,762 ರೂ.ಗಳಷ್ಟಿದೆ. ಈ ಕಡಿತದ ಮೊದಲು, ದೆಹಲಿಯಲ್ಲಿ ಸಿಲಿಂಡರ್‌ನ ಬೆಲೆ 1803 ರೂ.ಗಳಷ್ಟಿತ್ತು.
ಮುಂಬೈ: 1,755.50 ರೂ. ರಿಂದ 1,714.50 ರೂ.ಗೆ ಇಳಿಕೆ . ಕೋಲ್ಕತ್ತಾ: 1,913 ರೂ.ಗಳಿಂದ 1,872 ರೂ.ಗೆ ಇಳಿಕೆ, ಚೆನ್ನೈ: 1,965.50 ರೂ. ರಿಂದ 1,924.50 ಇಳಿಕೆಯಾಗಿದೆ.
ಗೃಹ ಬಳಕೆ 14.2 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 14.2 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 803 ರೂ., ಕೋಲ್ಕತ್ತಾದಲ್ಲಿ 829 ರೂ., ಮುಂಬೈನಲ್ಲಿ 802.50 ರೂ. ಮತ್ತು ಚೆನ್ನೈನಲ್ಲಿ 818.50 ರೂ. ಇದೆ.