Connect with us

Dvgsuddi Kannada | online news portal | Kannada news online

ಭಾರತೀಯ ಗಡಿ ಭದ್ರತೆ ಪಡೆಯಲ್ಲಿ 312 ಹೆಡ್ ಕಾನ್ ಸ್ಟೆಬಲ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ಸುದ್ದಿ

ಭಾರತೀಯ ಗಡಿ ಭದ್ರತೆ ಪಡೆಯಲ್ಲಿ 312 ಹೆಡ್ ಕಾನ್ ಸ್ಟೆಬಲ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ನವದೆಹಲಿ: ಭಾರತೀಯ ಗಡಿ ಭದ್ರತೆ ಪಡೆಯಲ್ಲಿ312 ಹೆಡ್‌ ಕಾನ್‌ ಸ್ಟೆಬಲ್‌ , 11 ಎಎಸ್‌ಐ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಸಲ್ಲಿಸಬೇಕು. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ,ಅರ್ಜಿ ತಿ ರಸ್ಕರಿಸಲಾಗುವುದು. ಹುದ್ದೆಗಳ ಮಾಹಿತಿ, ಅರ್ಜಿ ಸಲ್ಲಿಕೆ ವಿಧಾನ, ನೇಮಕಾತಿ ಪ್ರಕ್ರಿಯೆಯ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ https://rectt.bsf.gov.in/ ನಲ್ಲಿ ಮಾಹಿತಿ ಪಡೆಯಬಹುದು.

ಎಎಸ್‌ಐ  11, ಹೆಡ್‌ ಕಾನ್‌ಸ್ಟೆಬಲ್‌ 312 ಹೆದ್ದೆಗಳಿದ್ದು, ಅಂಗೀಕೃತ ಶಿಕ್ಷಣ ಸಂಸ್ಥೆಯಿಂದ ದ್ವಿತೀಯ ಪಿಯುಸಿಯಲ್ಲಿ(10+2) ಉತ್ತೀರ್ಣರಾಗಿರಬೇಕು. ಎಎಸ್‌ಐ ಹುದ್ದೆಗಳಿಗೆ ಟೈಪಿಂಗ್‌ ಹಾಗೂ ಸ್ಟನೊ ಡಿಪ್ಲೊಮಾ ಪಡೆದಿರಬೇಕು. ಮಾಸಿಕ 25,700 – 81,100 ರವರೆಗೆ ವೇತನ ನಿಗದಿಪಡಿಸಲಾಗಿದೆ. ಕನಿಷ್ಠ 18 ವರ್ಷದಿಂದ ಗರಿಷ್ಠ 25 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಕೆ ಕೊನೆ : ಸೆಪ್ಟೆಂಬರ್ 6. 2022. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: https://rectt.bsf.gov.in/ ಭೆಟಿ ನೀಡಿ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top