Connect with us

Dvgsuddi Kannada | online news portal | Kannada news online

ಬ್ಯಾಂಕ್ ಖಾಸಗಿಕರಣ ವಿರೋಧಿಸಿ ಮಾ.15,16ರಂದು ಮುಷ್ಕರ

ಪ್ರಮುಖ ಸುದ್ದಿ

ಬ್ಯಾಂಕ್ ಖಾಸಗಿಕರಣ ವಿರೋಧಿಸಿ ಮಾ.15,16ರಂದು ಮುಷ್ಕರ

ನವದೆಹಲಿ: ಬ್ಯಾಂಕ್ ಖಾಸಗಿಕರಣ ವಿರೋಧಿಸಿ ಯುನೈಟೆಡ್​ ಫೋರಂ ಆಫ್​ ಬ್ಯಾಂಕ್ ಯೂನಿಯನ್ಸ್​(ಯುಎಫ್​ಬಿಯು) ಮಾ. 15, 16ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ ನಡೆಸಲು ನಿರ್ಧರಿಸಿವೆ.

ಕೇಂದ್ರ ಬಜೆಟ್​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬ್ಯಾಂಕ್​ಗಳ ಖಾಸಗೀಕರಣ ಕುರಿತು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್​ ಅಧಿಕಾರಿ-ಸಿಬ್ಬಂದಿ ಈಗ ಖಾಸಗೀಕರಣ ವಿರೋಧಿಸಿ ಮುಷ್ಕರ ಕೈಗೊಳ್ಳಲು ಮುಂದಾಗಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್​ಗಳ ಖಾಸಗೀಕರಣ ಕುರಿತು ಬಜೆಟ್​ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್​ ಪ್ರಸ್ತಾಪಿಸಿದ್ದನ್ನು ವಿರೋಧಿಸಿ ಯುಎಫ್​ಬಿಯು ರಾಷ್ಟ್ರವ್ಯಾಪಿ ಬಂದ್​ಗೆ ಕರೆ ನೀಡಿದೆ. ಹೈದರಾಬಾದ್​ನಲ್ಲಿ 9 ಬ್ಯಾಂಕ್ ಸಂಘಟನೆಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಲ್​ ಇಂಡಿಯಾ ಬ್ಯಾಂಕ್​ ಎಂಪ್ಲಾಯಿಸ್​ ಅಸೋಸಿಯೇಷನ್​ (ಎಐಬಿಇಎ) ಜತೆಗೆ ಎಐಬಿಒಸಿ, ಎನ್​ಸಿಬಿಇ, ಎಐಬಿಒಎ, ಬಿಇಎಫ್​ಐ, ಐಎನ್​ಬಿಇಎಫ್​, ಐಎನ್​ಬಿಒಸಿ, ಎನ್​ಒಬಿಡಬ್ಲ್ಯು ಮತ್ತು ಎನ್​ಒಬಿಒ ಮುಂತಾದ ಸಂಘಟನೆಗಳು ಒಗ್ಗೂಡಿ ಈ ಬಂದ್​ಗೆ ನಿರ್ಧರಿಸಿವೆ.

ಹೈದರಾಬಾದ್​ನಲ್ಲಿ ನಡೆದ ಸಭೆಯಲ್ಲಿ ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿರುವ ಐಡಿಬಿಐ ಬ್ಯಾಂಕ್​ ಹಾಗೂ ಇನ್ನೂ ಎರಡು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್​ಗಳ ಖಾಸಗೀಕರಣ, ಎಲ್​ಐಸಿ ಬಂಡವಾಳ ಹಿಂದೆಗೆತ, ಜನರಲ್​ ಇನ್ಶೂರೆನ್ಸ್ ಕಂಪನಿ ಖಾಸಗೀಕರಣ ಇತ್ಯಾದಿಗಳು ಸಾರ್ವಜನಿಕ ಕ್ಷೇತ್ರದ ಕಂಪನಿಗಳಿಗೆ ಮಾರಕ. ಹೀಗಾಗಿ ಫೆ. 19ರಂದು ಎಲ್ಲ ರಾಜ್ಯಗಳ ರಾಜಧಾನಿಯಲ್ಲಿ ಧರಣಿ ನಡೆಸಲಾಗುವುದು. ಬಳಿಕ ಫೆ. 20ರಿಂದ ಮಾ. 10ರವರೆಗೆ ಎಲ್ಲ ರಾಜ್ಯ, ಜಿಲ್ಲೆ, ನಗರಗಳಲ್ಲಿ ಧರಣಿಗಳನ್ನು ನಡೆಸಿ, ಮಾರ್ಚ್​ 15 ಮತ್ತು 16ರಂದು ಎರಡು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಸಲಿವೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top