ಚೆನ್ನೈ: ತಮಿಳುನಾಡಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.
ಅಧಿಕೃತವಾಗಿ ಉಪಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಈ ಘೋಷಣೆ ಮಾಡಿದ್ದಾರೆ.ಮುಖ್ಯಮಂತ್ರಿ ಹುದ್ದೆಗೆ ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಭಿನ್ನಾಭಿಪ್ರಾಯ ಮರೆತು ರಾಜಿ ಸೂತ್ರದ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ.
https://twitter.com/ANI/status/1313719708034592769?ref_src=twsrc%5Etfw%7Ctwcamp%5Etweetembed%7Ctwterm%5E1313719708034592769%7Ctwgr%5Eshare_3&ref_url=https%3A%2F%2Fwww.prajavani.net%2Findia-news%2Faiadmk-announces-edappadi-palaniswami-as-cm-nominee-for-2021-polls-768789.html
ಪಕ್ಷದ ಚಟುವಟಿಕೆಗಳ ಮೇಲೆ ನಿಗಾವಹಿಸಲು 11 ಸದಸ್ಯರ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಪಳನಿಸ್ವಾಮಿ ಅವರ ಆರು ಮತ್ತು ಪನ್ನೀರ್‌ಸೆಲ್ವಂ ಅವರ ಐವರು ಬೆಂಬಲಿಗರಿದ್ದಾರೆ. ಪಳನಿಸ್ವಾಮಿ ಅವರ ಆರು ಬೆಂಬಲಿಗರು ಪ್ರಸ್ತುತ ಸಚಿವರಾಗಿದ್ದಾರೆ.



