ಬೆಂಗಳೂರು : ಹಳೆಯ 100 ರೂ. ನೋಟುಗಳನ್ನು ಆರ್ ಬಿಐ ಹಿಂಪಡೆದಿದ್ದು, ಮಾರ್ಚ್ ಅಂತ್ಯದೊಳಗೆ ಪೂರ್ಣವಾಗಿ ಸಂಪೂರ್ಣವಾಗಿ ವಾಪಸ್ ಪಡೆಯಲಾಗುವುದು ಎಂದು ತಿಳಿಸಿದೆ.
ಕಳೆದ 6 ವರ್ಷಗಳಿಂದ 100 ರೂಪಾಯಿ ಹಳೆ ನೋಟು ಮುದ್ರಣವಾಗಿಲ್ಲ. ಚಲಾವಣೆಯಲ್ಲಿರುವ ಹಳೆಯ ನೋಟುಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗುತ್ತಿದೆ. ಮಾರ್ಚ್ ಅಂತ್ಯಕ್ಕೆ ಇದು ಪೂರ್ಣವಾಗಲಿದೆ. ಇನ್ಮುಂದೆ 100 ರೂ. ಮುಖಬೆಲೆಯ ಹೊಸ ನೋಟುಗಳು ಮಾತ್ರ ಚಲಾವಣೆಯಲ್ಲಿರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.100 ರೂ. ಹಳೆಯ ನೋಟುಗಳನ್ನು ಗ್ರಾಹಕರು ಮಾರ್ಚ್ ಅಂತ್ಯದೊಳಗೆ ಬ್ಯಾಂಕ್ ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.



