ಬೆಂಗಳೂರು: 2021-22ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಬೆಂಗಳೂರು ಮೆಟ್ರೋಗೆ ಬಂಪರ್ ಕೊಡುಗೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತಗ್ವದ ಸರ್ಕಾರದ 9ನೇ ಬಜೆಟ್ ಇದಾಗಿದ್ದು, ಕರೊನಾ ಬಳಿಕ ಆರ್ಥಿಕ ಚೇತರಿಕೆಯನ್ನ ಗಮನದಲ್ಲಿ ಇಟ್ಟುಕೊಂಡೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್ ಮಂಡಿಸುತ್ತಿದ್ದಾರೆ.
ಈ ಬಾರಿಯ ಬಜೆಟ್ ನಲ್ಲಿ ಬೆಂಗಳೂರು ಮೆಟ್ರೋಗೂ ಬಂಪರ್ ಕೊಡುಗೆ ಕೊಟ್ಟಿದ್ದಾರೆ. ಬೆಂಗಳೂರು 2ನೇ ಹಂತದ ಮೆಟ್ರೋ ಕಾಮಗಾರಿಗೆ 14,788 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ. 58.19 ಕಿಲೋ ಮೀಟರ್ ಉದ್ಧದ ಮೆಟ್ರೋ ರೈಲ್ವೆ ಮಾರ್ಗದ 2a ಮತ್ತು 2b ಹಂತಕ್ಕೆ ಅನುದಾನ ನೀಡಲಾಗಿದೆ



