Connect with us

Dvgsuddi Kannada | online news portal | Kannada news online

ಮಾಸ್ಕ್ ದಂಡದ ಪ್ರಮಾಣವನ್ನು 250 ರೂಪಾಯಿಗೆ ಇಳಿಸಿದ ಸರ್ಕಾರ

ಪ್ರಮುಖ ಸುದ್ದಿ

ಮಾಸ್ಕ್ ದಂಡದ ಪ್ರಮಾಣವನ್ನು 250 ರೂಪಾಯಿಗೆ ಇಳಿಸಿದ ಸರ್ಕಾರ

ಡಿವಿಜಿ ಸುದ್ದಿ, ಬೆಂಗಳೂರು: ಜನ ಸಾಮಾನ್ಯರ ತೀವ್ರ ವಿರೋಧದಿಂದ ಎಚ್ಚೆತ್ತ  ರಾಜ್ಯ ಸರ್ಕಾರ , ಮಾಸ್ಕ್ ಹಾಕದವರಿಗೆ 1000 ರೂಪಾಯಿ ದಂಡದ ಬದಲಿಗೆ ಇದೀಗ 250 ರೂಪಾಯಿ ವಿಧಿಸುವಂತೆ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ  ಮುಂದುವರಿದ ಹಿನ್ನೆಲೆ ರಾಜ್ಯ ಸರ್ಕಾರ ಮಾಸ್ಕ್ ಹಾಕದವರಿಗೆ 1000 ದಂಡ ವಿಧಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿತ್ತು. ಈ ಬಗ್ಗೆ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ರಾಜ್ಯ ಸರ್ಕಾರ ಆದೇಶವನ್ನು ವಾಪಸ್ ಪಡೆದಿದೆ.

ನಗರ ಪ್ರದೇಶದಲ್ಲಿ 1000 ರೂಪಾಯಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ದಂಡ ವಿಧಿಸುವಂತೆ ರಾಜ್ಯ ಸರ್ಕಾರ ಈ ಹಿಂದೆ ಆದೇಶ ಮಾಡಿತ್ತು. ಇದೀಗ ನಗರ ಪ್ರದೇಶದಲ್ಲಿ 250 ರೂಪಾಯಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 100 ರೂಪಾಯಿಗೆ ಇಳಿಸಿದೆ ಈ ಕ್ಷಣದಿಂದಲೇ ಆದೇಶ ಹೊರಡಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top