ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ನೀಡಿದೆ. ಬಸ್ ಗಳಲ್ಲಿ ಲಗೇಜ್ (Luggage) ದರ ಹೆಚ್ಚಳವನ್ನು KSRTC ಮಾಡಿದೆ.
ನೂತನ ದರಗಳು ಡಿಸೆಂಬರ್ 10 ರಿಂದಲೇ ಜಾರಿಗೆ ಬರಲಿವೆ, ಕೆಎಸ್ ಆರ್ ಟಿಸಿ ನಷ್ಟದ ನೆಪವೊಡ್ಡಿ ಬಸ್ ಗಳಲ್ಲಿ ಲಗೇಜ್ ದರ ಪರಿಷ್ಕರಣೆ ಮಾಡಲಾಗಿದೆ. ಪ್ರತಿ ಸ್ಟೇಜ್ ಆಧಾರದ ಮೇಲೆ ಲಗೇಜ್ ದರ ನಿಗದಿಪಡಿಸಲಾಗಿದೆ. ಈ ದರ ಏರಿಕೆ ಮಧ್ಯಮ ವರ್ಗಕ್ಕೆ ಹೊರೆಯಾಗಲಿದೆ. ಶೇ 10 ರಷ್ಟು ಲಗೇಜ್ ದರ ಪರಿಷ್ಕರಣೆ ಮಾಡಲಾಗಿದೆ.



