ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾದಿಂದ ಅರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಈ ವರ್ಷ ಯಾವುದೇ ಅನುಕಂಪ ಆಧಾರಿತ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದೆ.
ಕೆಎಸ್ ಆರ್ ಟಿಸಿಯ ನಿರ್ಧಾರ ಉದ್ಯೋಗಾಂಕ್ಷಿಗಳಿಗೆ ಶಾಕ್ ಆಗಿದ್ದು, ಅನುಕಂಪ ಆಧಾರದ ಮೇಲೆ ಹುದ್ದೆಗೆ ಅರ್ಜಿ ಸಲ್ಲಿಸಿದವರ ಆಸೆಗೆ ಸರ್ಕಾರ ತಣ್ಣೀರೆರಿದಿದೆ.ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರ, ಕೆಎಸ್‌ಆರ್‌ಟಿಸಿ ಅನುಕಂಪ ಆಧಾರಿತ ನೇಮಕಾತಿಯನ್ನು ಈ ವರ್ಷ ಮಾತ್ರ ಕೈಬಿಡಲಾಗಿದೆ. ಅರ್ಜಿ ಸಲ್ಲಿಸುವವರು ಸಲ್ಲಿಸಬಹುದು. ಮುಂದೆ ಕೆಲಸಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಈ ಅರ್ಜಿಗಳನ್ನ ಪರಿಗಣಿಸಲಾಗುವುದು ಎಂದಿದ್ದಾರೆ.
ಕೆಎಸ್‌ಆರ್‌ಟಿಸಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ಆಕಾಲಿಕ ಮರಣ ಹೊಂದಿದರೆ, ಅವರ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರಿತ ಮೇಲೆ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ನೀಡಲಾಗುತ್ತದೆ. ಕೊರೊನಾ ಕಾರಣಕ್ಕಾಗಿ ಈ ವರ್ಷ ನೇಮಕಾತಿ ಮುಂದೂಡಿದೆ.



