Connect with us

Dvgsuddi Kannada | online news portal | Kannada news online

ಕೆಪಿಎಸ್ ಸಿ ಮೂಲಕ‌ 400 ಪಶು ವೈದ್ಯಾಧಿಕಾರಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ ; ಆ.12ರಿಂದ ಆನ್ ಲೈನ್ ಅರ್ಜಿ ಸಲ್ಲಿಸಲ್ಲಿಕೆ ಆರಂಭ

ಪ್ರಮುಖ ಸುದ್ದಿ

ಕೆಪಿಎಸ್ ಸಿ ಮೂಲಕ‌ 400 ಪಶು ವೈದ್ಯಾಧಿಕಾರಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ ; ಆ.12ರಿಂದ ಆನ್ ಲೈನ್ ಅರ್ಜಿ ಸಲ್ಲಿಸಲ್ಲಿಕೆ ಆರಂಭ

ಬೆಂಗಳೂರು: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್-ಎ ದರ್ಜೆಯ 400 ಪಶು ವೈದ್ಯಾಧಿಕಾರಿಗಳ ಹುದ್ದೆ ಭೆರ್ತಿಗೆ ಕೆಪಿಎಸ್‌ಸಿ ಮೂಲಕ ಆನ್ ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆಗಸ್ಟ್ 12ರಿಂದ ಕೆಪಿಎಸ್ ಸಿ ವೆಬ್ ಸೈಟ್ https://kpsc.kar.nic.in/‌ ಮೂಲಕ ಅರ್ಜಿ ಸಲ್ಲಿಸಬಹುದು.

  • ಹುದ್ದೆ ವಿವರ: ಪಶು ವೈದ್ಯಾಧಿಕಾರಿ
    ಹುದ್ದೆಗಳ ಸಂಖ್ಯೆ: 342 (ಉಳಿಕೆ ಮೂಲ ವೃಂದ) + 58 (ಬ್ಯಾಕ್‌ಲಾಗ್‌)
  • ಅರ್ಜಿ ಸಲ್ಲಿಕೆ ಆರಂಭ: ಆಗಸ್ಟ್‌ 12
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆ.12
  • ವಿದ್ಯಾರ್ಹತೆ : ಪಶು ವೈದ್ಯಕೀಯ ವಿಜ್ಞಾನ (BVSc), ಪಶು ವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ (B.V.Sc. & AH) ಪದವೀಧರರು ಅರ್ಜಿ ಸಲ್ಲಿಸಬಹುದು. (ಕೆವಿಸಿ/ಐವಿಸಿಯಲ್ಲಿ ನೋಂದಣಿಯಾಗಿರಬೇಕು)
  • ವಯೋಮಿತಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ – 18 ವರ್ಷಗಳ ವಯೋಮಾನದವರಾಗಿರಬೇಕು ಹಾಗೂ ಕೆಳಕಂಡ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
  • ಸಾಮಾನ್ಯ ಅರ್ಹತೆ: 35 ವರ್ಷ
    ಒಬಿಸಿ (2ಎ, 2ಬಿ, 3ಎ, 3ಬಿ): 38 ವರ್ಷ
    ಎಸ್‌ಸಿ, ಎಸ್‌ಟಿ, ಪ್ರವರ್ಗ-1: 40 ವರ್ಷ
  • ಅರ್ಜಿ ಶುಲ್ಕ : ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ: 600 ರೂ.
    ಒಬಿಸಿ (2ಎ, 2ಬಿ, 3ಎ, 3ಬಿ):300 ರೂ.
    ಮಾಜಿ ಸೈನಿಕರಿಗೆ : 50 ರೂ.
    ಎಸ್‌ಸಿ, ಎಸ್‌ಟಿ, ಪ್ರವರ್ಗ-1, ವಿಶೇಷ ಚೇತನರು: ಶುಲ್ಕ ಪಾವತಿಯಿಂದ ವಿನಾಯಿತಿ
  • ಅಧಿಸೂಚನೆಗಾಗಿ kpsc ವೆಬ್ ಸೈಟ್ https://kpsc.kar.nic.in/‌ಬೇಟಿ‌ನೀಡಿ
  • ಆಯ್ಕೆ ವಿಧಾನ: ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ:
    ಈ ಹುದ್ದೆಗಳಿಗೆ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ) ನಿಯಮಗಳು 2021ರ ನಿಯಮ ಉಪ ನಿಯಮ-7 ರಲ್ಲಿ ನಿರ್ದಿಷ್ಟ ಪಡಿಸಲಾದಂತೆ, ಯಾರೇ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯದ ಹೊರತು ಆಯ್ಕೆಗೆ ಅರ್ಹರಾಗುವುದಿಲ್ಲ. ಈ ಪರೀಕ್ಷೆಯು ಗರಿಷ್ಠ 150 ಅಂಕಗಳ ಒಂದು ಪ್ರಶ್ನೆ ಪತ್ರಿಕೆಯನ್ನು ಒಳಗೊಂಡಿದ್ದು, ಅಭ್ಯರ್ಥಿಯು ಈ ಪತ್ರಿಕೆಯಲ್ಲಿ.. ಅರ್ಹತೆ ಹೊಂದಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಈ ಪ್ರಶ್ನೆ ಪತ್ರಿಕೆಯನ್ನು ಎಸ್.ಎಸ್.ಎಲ್.ಸಿ. ಹಂತದಲ್ಲಿನ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವನ್ನಾಗಿಟ್ಟುಕೊಂಡು ಸಿದ್ಧಪಡಿಸಲಾಗುವುದು.

ವಿಶೇಷ ಸೂಚನೆ: ಕನ್ನಡ ಭಾಷಾ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ) ನಿಯಮಗಳು 2021ರನ್ವಯ ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ: 29-11-2022ರಂದು ಮತ್ತು ಆ ನಂತರದಲ್ಲಿ ನಡೆಸಿರುವ ಕನ್ನಡ ಭಾಷಾ ಪರೀಕ್ಷೆಗಳಿಗೆ ಹಾಜರಾಗಿ ಉರ್ತೀರ್ಣರಾಗಿದ್ದಲ್ಲಿ ಅದರ ಫಲಿತಾಂಶವನ್ನು ಈ ಅಧಿಸೂಚನೆಯಲ್ಲಿನ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಗೂ ಪರಿಗಣಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಆನ್ ಲೈನ್ ಅರ್ಜಿಯಲ್ಲಿನ ನಿಗದಿತ ಅಂಕಣದಲ್ಲಿ ಕನ್ನಡ ಭಾಷಾ ಪರೀಕ್ಷೆ ಕುರಿತಂತೆ ಕೇಳಿರುವ ಮಾಹಿತಿಯನ್ನು ತಪ್ಪದೇ ನಮೂದಿಸಬೇಕು.

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ : ಈ ಪರೀಕ್ಷೆಯು ತಲಾ 300 ಅಂಕಗಳ ಎರಡು ಲಿಖಿತ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದ್ದು, ವಸ್ತು ನಿಮ್ಮ ಬಹು ಆಯ್ಕೆ ಮಾದರಿಯಲ್ಲಿ ಇರುತ್ತವೆ. ಪ್ರತಿಯೊಂದು ಪ್ರಶ್ನೆಯು ಋಣಾತ್ಮಕ ಅಂಕದ ಸ್ವರೂಪದ್ದಾಗಿದ್ದು, ಪ್ರತಿಯೊಂದು ತಪ್ಪಾದ ಉತ್ತರಕ್ಕೆ ಪ್ರಶ್ನೆಗಳಿಗೆ ಹಂಚಿಕೆ ಮಾಡಲಾದ ಅಂಕಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು(1/4) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. Paper 1- ಸಾಮಾನ್ಯ ಪತ್ರಿಕೆ: 300 ಅಂಕ, Paper 2- ನಿರ್ದಿಷ್ಟ ಪತ್ರಿಕೆ: 300

Dvgsuddi.com is a live Kannada news portal. Kannada news online. political, Informative, Education, job, local (davangere), crime, agriculture, Sports News in Kannada. ಡಿವಿಜಿಸುದ್ದಿ. ಕಾಂ ‌ಆನ್ ಲೈನ್ ನ್ಯೂಸ್ ಪೋರ್ಟಲ್‌ ಆಗಿದ್ದು, ಸ್ಥಳೀಯ (ದಾವಣಗೆರೆ) ಸುದ್ದಿ ಜೊತೆ ಇನ್ಫೋರ್ಮೆಟಿವ್ ಸುದ್ದಿ‌ ಕೊಡುವುದು ಮೊದಲ ಆದ್ಯತೆ. ಸ್ಥಳೀಯ ಸುದ್ದಿ, ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಜೊತೆ ಕೃಷಿ, ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top