Connect with us

Dvgsuddi Kannada | online news portal | Kannada news online

ದಾಖಲೆಯ 7 ಸಾವಿರ ಗಡಿ ತಲುಪಿದ ಹಸಿ ಅಡಿಕೆ ದರ

ಪ್ರಮುಖ ಸುದ್ದಿ

ದಾಖಲೆಯ 7 ಸಾವಿರ ಗಡಿ ತಲುಪಿದ ಹಸಿ ಅಡಿಕೆ ದರ

ಶಿರಸಿ: ಹಸಿ ಅಡಿಕೆ ದರ ಶನಿವಾರ ಸಂಜೆ ಪ್ರತಿ ಕ್ವಿಂಟಲ್‍ಗೆ ದಾಖಲೆಯ 7 ಸಾವಿರ ಗಡಿ ತಲುಪಿದೆ. ಟಿಎಸ್‌ಎಸ್ ಆವಾರದಲ್ಲಿ ನಡೆಯುತ್ತಿರುವ ಟೆಂಡರ್ ಪ್ರಕ್ರಿಯೆಯಲ್ಲಿ ಈ ಮೊತ್ತ ದಾಖಲಾಯಿತು.

ಮೊದಲ ಬಾರಿಗೆ ದಿನಕ್ಕೆ ಎರಡು ಬಾರಿ ಟೆಂಡರ್ ಪ್ರಕ್ರಿಯೆಯನ್ನು ಟಿಎಸ್‌ಎಸ್ ಸಂಸ್ಥೆ ನಡೆಸಿತು. ಸಂಜೆ ಟೆಂಡರ್‌ನಲ್ಲಿ ಹಸಿ ಅಡಿಕೆ 7,001 ದರದಲ್ಲಿ ಮಾರಾಟಗೊಂಡಿದೆ. ಸುಮಾರು 3 ಕ್ವಿಂಟಲ್‍ನಷ್ಟು ಅಡಿಕೆಗೆ ಈ ದರ ಲಭಿಸಿತು. ಎರಡನೇ ಅವಧಿಯ ಟೆಂಡರ್‌ನಲ್ಲಿ 100 ಕ್ವಿಂಟಲ್‍ಗೂ ಹೆಚ್ಚು ತೂಕದ ಅಡಿಕೆ ಮಾರಾಟಗೊಂಡಿದೆ. ಈ ಬಾರಿ ಶೇ 60ಕ್ಕಿಂತ ಹೆಚ್ಚು ಹಸಿ ಅಡಿಕೆ ಫಸಲನ್ನೇ ರೈತರು ಮಾರಾಟ ನಡೆಸುತ್ತಿದ್ದಾರೆ. ಜನವರಿಯಿಂದ ಸತತವಾಗಿ ಹಸಿ ಅಡಿಕೆ ದರ ಏರಿಕೆ ಕಾಣುತ್ತಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});