ದಕ್ಷಿಣ ಕನ್ನಡ: ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಇಂದು ಬೆಳಿಗ್ಗೆ ಕಾರು- ರಿಕ್ಷಾ ನಡುವೆ ಭೀರಕ ಅಪಘಾತ ಸಂಭವಿಸಿದೆ. ರಿಕ್ಷಾ ಚಾಲಕ, ಪಜೀರು ಸೇನೆರೆಬೈಲು ಶ್ಯಾಮಪ್ರಸಾದ್ (45) ಮೃತಪಟ್ಟಿದ್ದಾರೆ.
ಮಂಗಳೂರಿನಿಂದ ವಾಪಸ್ ಬರುವ ಸಂದರ್ಭದಲ್ಲಿ ರಿಕ್ಷಾ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ರಿಕ್ಷಾದಿಂದ ಚಾಲಕ ಕೆಳಗೆ ಬಿದ್ದಿದ್ದಾನೆ. ಕಾರು ಅವರ ಮೇಲೆ ಚಲಿಸಿದೆ. ತಂಗುದಾಣದಲ್ಲಿ ರಿಕ್ಷಾವನ್ನು ಬಾಡಿಗೆಗೆ ನಿಲ್ಲಿಸಿದ್ದಾಗ ಈ ಘಟನೆ ನಡೆದಿದೆ.



