ಬೆಳಗಾವಿ: ಏಪ್ರಿಲ್ ಅಥವಾ ಮೇ ನಲ್ಲಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯಿತಿ ಮಡೆಯಲಿದ್ದು, ಈ ಬಾರಿ ಮತಯಂತ್ರದ ಬದಲು, ಮತಪತ್ರಗಳ ಬಳಕೆಗೆ ಮಾಡಲಾಗುವುದು ಎಂದು ಚುನಾವಣಾ ಆಯೋಗ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆ ಕಾರಣ ಚುನಾವಣೆ ವಿಳಂಬವಾಗಿದೆ. ಕ್ಷೇತ್ರವಾರು ಮೀಸಲಾತಿಯನ್ನು ಪ್ರಕಟಣೆ ಬಳಿಕ ಚುನಾವಣೆ ಘೋಷಿಸಲಾಗುವುದು.
ಪ್ರತಿ ಸಲ ಚುನಾವಣೆ ಮುಗಿದ ಬಳಿಕ ಇವಿಎಂ ಯಂತ್ರಗಳ ವಿಶ್ವಾಸಾರ್ಹತೆ ಪ್ರಶ್ನಿಸಲಾಗುತ್ತದೆ. ಈ ಬಾರಿ ಎಲೆಕ್ಟ್ರಿಕ್ ಯಂತ್ರ ಬದಲು ಮತಪತ್ರಗಳನ್ನೇ ಬಳಸುವ ಉದ್ದೇಶವಿದ್ದು,ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ರಾಜಕೀಯ ಪಕ್ಷಗಳ ನಾಯಕರು ಮತ್ತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ, ಮತಪತ್ರಗಳ ಬಳಕೆ ಬಗ್ಗೆ ತೀರ್ಮಾನಿಸಲಾಗುವುದು ಎಂದರು.