ವಿಜಯನಗರ: ಗಂಡ- ಹೆಂಡತಿ ಇಬ್ಬರೂ ಆರೋಗ್ಯಾಧಿಕಾರಿಗಳು. ಇಬ್ಬರಿಗೂ ಸರ್ಕಾರಿ ನೌಕರಿ. ಸುಖವಾಗಿ ಇರಬೇಕಿದ್ದ ಇಬ್ಬರ ನಡುವೆ ವೈಮನಸು ಜಗಳ ನಡೆದಿದ್ದು, ಗಂಡ-ಹೆಂಡತಿ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಂದಿರುವ ಹಾಕಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ನಡೆದಿದೆ.
ಹೂವಿನ ಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಎಚ್.ಡಿ. ಕೋಟೆ ತಾಲೂಕಿನ ಮಾದಾಪುರ ಗ್ರಾಮದ ಡಿಂಪಲ್‌ರನ್ನು (28) ಮೃತ ದುರ್ದೈವಿಯಾಗಿದ್ದು, ಆಕೆಯ ಪತಿ ಶ್ರೀಕಾಂತ್ ಹತ್ಯೆ ಮಾಡಿದ್ದಾರೆ.ಡಿಂಪಲ್ ಉಲವತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಸಮುದಾಯ ಕೇಂದ್ರದ ಆರೋಗ್ಯಾಧಿಕಾರಿಯಾಗಿದ್ದರು. ಆರೋಪಿ ಶ್ರೀಕಾಂತ್ ಕೂಡ ನೆಲ್ಲುಕುದರಿ ಗ್ರಾಮದ ಪ್ರಾ. ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಯಾಗಿದ್ದರು. ಶುಕ್ರವಾರ (ನ.24) ಇದ್ದಕ್ಕಿದ್ದಂತೆ ಪತಿ – ಪತ್ನಿ ನಡುವೆ ಜಗಳ ಆಗಿದೆ. ಆ ಜಗಳದಲ್ಲಿ ಸಿಟ್ಟಿಗೆದ್ದು ಪತ್ನಿಯನ್ನು ಶ್ರೀಕಾಂತ್ ಕೊಲೆ ಮಾಡಿದ್ದಾನೆ. ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಹತ್ಯೆ ಮಾಡಿದ ಬಳಿಕ ಶ್ರೀಕಾಂತ್ ನೇರವಾಗಿ ಇಟ್ಟಗಿ ಠಾಣೆಗೆ ತೆರಳಿ ನಡೆದಿದ್ದನ್ನು ಪೊಲೀಸರಿಗೆ ತಿಳಿಸಿ, ಶರಣಾಗಿದ್ದಾನೆ.



