ಬೆಂಗಳೂರು: ಗಂಡಸರಿಗೆ ಉಚಿತ ಪ್ರಯಾಣ ಕೊಡದಿದ್ದರೆ ನಮಗೆ ಅವಮಾನ. ಉಚಿತ ಪ್ರಯಾಣ ಅಂತಾ ಹೆಂಗಸರು ಯಾರ ಮಾತನ್ನು ಕೇಳುತ್ತಿಲ್ಲ.ಮಹಿಳೆಯರ ಉಚಿತ ಪ್ರಯಾಣ ನಾನು ವಿರೋಧ ಮಾಡುತ್ತಿಲ್ಲ, ಸರ್ಕಾರ ಗಂಡಸರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಗಂಡಸರಿಗೆ ಉಚಿತ ಪ್ರಯಾಣ ಕೊಡದಿದ್ದರೆ ನಮಗೆ ಅವಮಾನ ಆಗುತ್ತದೆ. ಮುಂದಿನ ವಾರ ಬಿಎಂಟಿಸಿ ಬಸ್ ಹತ್ತಿ ಎಲ್ಲ ಗಂಡಸರ ಪರವಾಗಿ ನಾನು ಫ್ರೀ ಬಸ್ ಕೇಳುತ್ತೇನೆ ಎಂದು ಹೇಳಿದರು.
ಮನೆ ಎರೆಡು ಭಾಗ ಮಾಡಿದ್ದೀರಿ ಎಲ್ಲರಿಗೂ ಉಚಿತ ಕೊಡಿ. ಗಂಡಸರ ಉಚಿತ ಪ್ರಯಾಣ ಬಗ್ಗೆಯೂ ಬಜೆಟ್ನಲ್ಲಿ ಘೋಷಿಸಿ. ಯಾಕೆ ಗಂಡಸರು ವೋಟ್ ಹಾಕಿಲ್ವಾ, ಅವರಿಗೂ ಸಹ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ.



