ಬೆಂಗಳೂರು: ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ನಾಳೆಯಿಂದ ಕರ್ನಾಟಕ ರಾಜ್ಯದಾದ್ಯಂತ ಸಂಫೂರ್ಣ ಬಿಗಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಸಂಪುಟ ಸಭೆಯ ಬಳಿಕ ಮಾಯತನಾಡಿದ ಅವರು, 14 ದಿನ ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ ಮುಂದುವರೆಯಲಿದೆ. ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುವುದು. 15 ದಿನ ನಂತರವೂ ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ಮತ್ತೆ ಮುಂದುವರಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ನಾಳೆಯಿಂದ 14 ದಿನ ಬಿಗಿ ಕ್ರಮ ಜಾರಿ ಇರುತ್ತದೆ. 6 ರಿಂದ 10 ಗಂಟೆ ವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ. ನಂತರ ಎಲ್ಲ ವ್ಯಾಪಾರಸ್ಥರು ಸ್ವತಃ ತಾವೇ ಬಾಗಿಲು ಹಾಕಬೇಕು. ಉತ್ಪಾದನ ವಲ, ಕೃಷಿ, ಕಟ್ಟಡ ನಿರ್ಮಾಣ ವಲಯಕ್ಕೆ ಯಾವುದೇ ತೊಂದರೆ ಇಲ್ಲ. ಕರ್ಫ್ಯೂ 14 ದಿನ ಜಾರಿ ಇರಲಿದೆ. ಪ್ರತಿ ತಾಲ್ಲೂಕು ತಹಶೀಲ್ದಾರ್ ಬಿಗಿ ಬಂದೋಬಸ್ತ್ ನೋಡಲ್ ಅಧಿಕಾರಿಯಾಗಿ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಕೃಷಿ ಮತ್ತು ಕಟ್ಟಡ ನಿರ್ಮಾಣ, ಉತ್ಪಾದನ ವಲಯ ಹೊರತುಪಡಿಸಿ ಉಳಿದವರಿಗೆ ಸಂಚಾರಕ್ಕೆ ನಿರ್ಬಂಧ ಹೇರಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೊನಾ ಸೋಂಕು ಹರಡುತ್ತಿದೆ. ಮಹಾರಾಷ್ಟ್ರ ಹಿಂದಿಕ್ಕಿ ಹರಡುತ್ತಿದೆ. ಸಚಿವ ಸಂಪುಟ ಸದಸ್ಯರು, ತಜ್ಞರು ಜೊತೆ ಚರ್ಚಿಸಿ ನಿರ್ಧಾರಕ್ಕೆ ಬಿಗಿ ಕ್ರಮಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ ಕೊರತೆ ಇಲ್ಲ. ಕೇಂದ್ರ ಪೂರೈಕೆಗೆ ಮುಂದಾಗಿದೆ ರಮ್ ಡಿಸಿವರ್ ಲಸಿಕೆ ಅಗತ್ಯ ಪೂರೈಕೆಗೆ ಆಗಲಿದೆ ಎಂದರು.
ಪ್ರಯಾಣಿಕರ ಸಂಚಾರ ವಾಹನ ಸಂಪೂರ್ಣವಾಗಿ ಬಂದ್ ಆಗಲಿದ್ದು, ಹೊರ ರಾಜ್ಯಗಳಿಂದ ಬರುವ ಮತ್ತು ರಾಜ್ಯದಿಂದ ಹೊರ ರಾಜ್ಯಕ್ಕೆ ಅಗತ್ಯ ವಸ್ತು ಸಾಗಣಿಕೆಗೆ ಯಾವುದೇ ನಿರ್ಭಂದ ವಿಧಿಸಿಲ್ಲ. ಕೆಎಸ್ ಆರ್ ಟಿಸಿ, ಬಿಎಂಟಿಸಿ ಮೆಟ್ರೋ ಸಂಪೂರ್ಣ ಬಂದ್ ಆಗಲಿದೆ. ಹೋಟೆಲ್ ಬಂದ್ ಆಗಲಿದ್ದು, ಪಾರ್ಸಲ್ ತರಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಇನ್ನು ಮದ್ಯ ಪ್ರಿಯರು ಪಾರ್ಸಲ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ.