ಬೆಂಗಳೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯ ದ್ವಿತೀಯ ಪಿಯುಸಿ (PUC result) ಪರೀಕ್ಷೆಗೆ ಒಟ್ಟು 6.47 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ ಒಟ್ಟು 4.68 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡಾ ಶೇ 73.45 ರಷ್ಟು ಫಲಿತಾಂಶ ದಾಖಲಾಗಿದೆ.
ದಾವಣಗೆರೆ: ಅಡಿಕೆ ಮರಕ್ಕೆ ಕಟ್ಟಿ ಹಾಕಿ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ; 9 ಆರೋಪಿಗಳ ಬಂಧನ
ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಆದರೆ, ಕಳೆದ ಬಾರಿಗೆ ಹೋಲಿಸಿದರೆ ಶೇ 8ರಷ್ಟು ಫಲಿತಾಂಶ ಕಡಿಮೆಯಾಗಿದೆ. 2024ರಲ್ಲಿ ಶೇ 81.15 ಫಲಿತಾಂಶ ಬಂದಿತ್ತು. ಇನ್ನು ಜಿಲ್ಲಾವಾರು ಫಲಿತಾಂಶ ನೋಡುವುದಾದರೆ ಈ ಬಾರಿ ಉಡುಪಿ ಜಿಲ್ಲೆ ಶೇ 93.90 ರಷ್ಟು ಫಲಿತಾಂಶ ದಾಖಲಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದೆ. ಕಳೆದ ಬಾರಿ ಪ್ರಥಮ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ (93.57%) ಎರಡನೇ ಸ್ಥಾನಕ್ಕೆ ಕುಸಿದಿದೆ. ಬೆಂಗಳೂರು ದಕ್ಷಿಣ (85.36%) ಮೂರನೇ ಸ್ಥಾನದಲ್ಲಿದೆ. ದಾವಣಗೆರೆ ಜಿಲ್ಲೆಗೆ ಶೇ 69.45 ಫಲಿತಾಂಶದೊಂದಿಗೆ 20ನೇ ಸ್ಥಾನ ಲಭಿಸಿದೆ. ಶೇ 48.45ರಷ್ಟು ಫಲಿತಾಂಶ ಪಡೆಯುವುದರೊಂದಿಗೆ ಯಾದಗಿರಿ ಕೊನೆಯ ಸ್ಥಾನ ಪಡೆದಿದೆ.
ಪಿಯುಸಿ ಫಲಿತಾಂಶದ ಪ್ರಮುಖ ಅಂಶ
- ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು: 6.47 ಲಕ್ಷ
- ಪಾಸ್ ಆದ ವಿದ್ಯಾರ್ಥಿಗಳು: 4.68 ಲಕ್ಷ
- ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು: 1 ಲಕ್ಷ
- ಗರಿಷ್ಠ ಫಲಿತಾಂಶ: ಉಡುಪಿ (ಶೇ 93.90)
- ಕನಿಷ್ಠ ಫಲಿತಾಂಶ: ಯಾದಗಿರಿ 48.45
- ಕರ್ನಾಟಕದ ಸರಾಸರಿ ಫಲಿತಾಂಶ: ಶೇ 73.45
32 ಜಿಲ್ಲಾವಾರು ಫಲಿತಾಂಶ
- ಉಡುಪಿ – ಶೇ 93.30
- ದಕ್ಷಿಣ ಕನ್ನಡ – ಶೇ 93.57
- ಬೆಂಗಳೂರು ದಕ್ಷಿಣ – ಶೇ 85.36
- ಕೊಡಗು – ಶೇ 83.84
- ಬೆಂಗಳೂರು ಉತ್ತರ – ಶೇ 83.81
- ಉತ್ತರ ಕನ್ನಡ – ಶೇ 82.93
- ಶಿವಮೊಗ್ಗ – ಶೇ 79.91
- ಬೆಂಗಳೂರು ಗ್ರಾಮಾಂತರ – ಶೇ 79.70
- ಚಿಕ್ಕಮಗಳೂರು – ಶೇ 79.56
- ಹಾಸನ – ಶೇ 77.56
- ಚಿಕ್ಕಬಳ್ಳಾಪುರ – ಶೇ 75.80
- ಮೈಸೂರು – ಶೇ 74.30
- ಚಾಮರಾಜನಗರ – ಶೇ 73.97
- ಮಂಡ್ಯ – ಶೇ 73.27
- ಬಾಗಲಕೋಟೆ – ಶೇ 72.83
- ಕೋಲಾರ – ಶೇ 72.45
- ಧಾರವಾಡ – ಶೇ 72.32
- ತುಮಕೂರು – ಶೇ 72.02
- ರಾಮನಗರ – ಶೇ 69.71
- ದಾವಣಗೆರೆ – ಶೇ 69.45
- ಹಾವೇರಿ – ಶೇ 67.56
- ಬೀದರ್ – ಶೇ 67.31
- ಕೊಪ್ಪಳ – ಶೇ 67.20
- ಚಿಕ್ಕೋಡಿ – ಶೇ 66.76
- ಗದಗ – ಶೇ 66.64
- ಬೆಳಗಾವಿ – ಶೇ 65.37
- ಬಳ್ಳಾರಿ – ಶೇ 64.41
- ಚಿತ್ರದುರ್ಗ – ಶೇ 59.87
- ವಿಜಯಪುರ – ಶೇ 58.81
- ರಾಯಚೂರು – ಶೇ 58.75
- ಕಲಬುರಗಿ – ಶೇ 55.70
- ಯಾದಗಿರಿ – ಶೇ 48.45