ಬೆಂಗಳೂರು: ಕೊರೊನಾ ಮತ್ತು ಲಾಕ್ಡೌನ್ನಿಂದಾಗಿ ಶಾಲೆಗಳ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ 1 ವರ್ಷ ಸ್ಕೂಲ್ಗಳು ಬಂದ್ ಆಗುತ್ತಿವೆ. ಈಗಾಗಲೇ 9, 10, ಪ್ರಥಮ ಮತ್ತು ದ್ವಿತೀಯ ಪಿಯು ಕ್ಲಾಸ್ ಓಪನ್ ಆಗಿದೆ. ಇಂದಿನಿಂದ 6, 7, 8ನೇ ತರಗತಿಗಳು ಪ್ರಾರಂಭವಾಗಲಿವೆ.
6, 7, 8ನೇ ತರಗತಿಗಳನ್ನ ಆರಂಭಿಸಲು ನಿರ್ಧರಿಸಿರೋ ಶಿಕ್ಷಣ ಇಲಾಖೆ, ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ. ಆ ಗೈಡ್ಲೈನ್ಸ್ನ್ನು ಕಡ್ಡಾಯವಾಗಿ ಪಾಲಿಸಬೇಕು ಅಂತಾ ಖಡಕ್ ಆಗಿ ಹೇಳಿದೆ.ಕ್ಲಾಸ್ ಗೈಡ್ಲೈನ್ಸ್ ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡ್ಡಾಯವಲ್ಲ ಅಂತಾ ಶಿಕ್ಷಣ ಇಲಾಖೆ ಮಾರ್ಗಸೂಚಿಯಲ್ಲಿ ಹೇಳಿದೆ. ಕೊವಿಡ್ ನೆಗೆಟಿವ್ ರಿಪೋರ್ಟ್ ಇದ್ರಷ್ಟೇ ವಿದ್ಯಾರ್ಥಿಗಳಿಗೆ ತರಗತಿಗೆ ಬರಲು ಅವಕಾಶ ಇರುತ್ತೆ.
ಕೊರೊನಾ ಲಕ್ಷಣಗಳಿದ್ರೆ ಅವಕಾಶ ಇರಲ್ಲ. ಇದ್ರ ಜೊತೆಗೆ ವಿದ್ಯಾರ್ಥಿಗಳು ಆನ್ಲೈನ್ನಲ್ಲೂ ಪಾಠ ಕೇಳಬಹುದು. ಆದ್ರೆ, ಶಾಲೆಗೆ ಬರುವ ಮಕ್ಕಳಿಗೆ ಪೋಷಕರ ಅನುಮತಿ ಕಡ್ಡಾಯವಾಗಿರಬೇಕು ಅಂತಾ ಶಿಕ್ಷಣ ಇಲಾಖೆ ಗೈಡ್ಲೈನ್ಸ್ನಲ್ಲಿ ತಿಳಿಸಿದೆ.
ರಾಜ್ಯದಲ್ಲಿ 6ರಿಂದ 8ನೇ ತರಗತಿ ಶುರು ಆಗ್ತಿವೆ. ಬೆಂಗಳೂರಿಗೆ ಮಾತ್ರ ಈ ಆದೇಶ ಅನ್ವಯ ಆಗಲ್ಲ. ಯಾಕಂದ್ರೆ, ಬೆಂಗಳೂರು ನಗರವನ್ನ ವಿಶೇಷವಾಗಿ ಪರಿಗಣಿಸಲಾಗ್ತಿದೆ. ಹೀಗಾಗೇ, ರಾಜಧಾನಿಯಲ್ಲಿ 6 ಮತ್ತು 7ನೇ ತರಗತಿ ಆರಂಭ ಆಗಲ್ಲ. ಕೇವಲ 8ನೇ ತರಗತಿ ಮಾತ್ರ ಶುರು ಆಗುತ್ತಿದೆ.