ಬೆಂಗಳೂರು: ವಾಹನಗಳ ನೋಂದಣಿ ಫಲಕದಲ್ಲಿ ನಂಬರ್ ಹೊರತು ಪಡೆಸಿ ಬೇರೆ ಅಕ್ಷರ, ಹೆಸರಿದ್ರೆ ದಂಡ ವಿಧಿಸಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಸಾರಿಗೆ ಇಲಾಖೆ ಮಾರ್ಚ್ 12ರಂದೇ ಈ ಆದೇಶ ಜಾರಿಮಾಡಿದ್ದು, ಮೋಟಾರು ವಾಹನ ಕಾಯ್ದೆ 50-51ರಂತೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಈ ಕಾಯ್ದೆಯನ್ವಯ ವಾಹನ ಫಲಕದಲ್ಲಿ ನಂಬರ್ ಬಿಟ್ಟು, ಬೇರೆ ಯಾವುದೇ ಅಕ್ಷರ ಬರೆಯುವಂತಿಲ್ಲ.
ಹುದ್ದೆಯ ಹೆಸರು, ಇಲಾಖೆಗಳ ಹೆಸರನ್ನೂ ಬರೆಯುವಂತಿಲ್ಲ. ಒಂದು ವೇಳೆ ಬೇರೆ ಅಕ್ಷರ ಕಂಡು ಬಂದಿದ್ದೇ ಆದಲ್ಲಿ ದಂಡ ಪಾವತಿಸಬೇಕಾಗುತ್ತೆ ಎಂದು ಇಲಾಖೆ ತಿಳಿಸಿದೆ



