ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇಂದು ಎಸ್ ಐಟಿ ಮುಂದೆ ಸಿಡಿ ಲೇಡಿ ಪೋಕರು ಹಾಜರಾಗಿದ್ದಾರೆ.
ಆಡುಗೋಡೆಯ ಟೆಕ್ಷನಿಕಲ್ ವಿಂಗ್ ಎದುರು ಸಿಡಿ ಲೇಡಿ ಪೋಷಕರು ಹಾಜರಾಗಿದ್ದಾರೆ. ಎಸ್ ಐಟಿ ಮುಂದೆ ಸಿಡಿ ಲೇಡಿ ಪೋಷಕರು ಹಾಜರಾಗಿ ಪ್ರಕಣಕ್ಕೆ ಸಬಂಧಿಸಿದಂತೆ ಯುವತಿಯ ಪೋಷಕರು ಹೇಳಿಕೆಯನ್ನು ದಾಖಲಿಸುತ್ತಾರೆ. ಈ ಮೂಲಕ ಪೋಷಕರ ತನಿಖೆಯಿಂದ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಂತಾಗಲಿದೆ. ಯುವತಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾದ ಕ್ಷಣದಿಂದ ಹಲವು ಹೈಡ್ರಾಮಗಳು ನಡೆದಿದ್ದವು. ಯುವತಿ ಪೋಷಕರ ಜೊತೆ ಮಾತನಾಡಿದ್ದಾರೆ ಎನ್ನಲಾದ ಾಡಿಯೋ ಕೂಡ ರಿಲೀಸ್ ಆಗಿತ್ತು.



