ಬೆಂಗಳೂರು: ರಾಜ್ಯದ 16 ಜಿಲ್ಲೆಗಳಲ್ಲಿ ಫೆ. 18ರಿಂದ 20ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಫೆ. 20ರವೆರೆಗೆ ಮಳೆಯಾಗಲಿದೆ ಎಂದು ತಿಳಿಸಿದೆ.
ದಾವಣಗೆರೆಯಲ್ಲಿ 12. ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಫೆಬ್ರವರಿ 18ರವರೆಗೆ ರಾಜ್ಯದ ವಿವಿಧೆಡೆ ಒಣಹವೆ ಮುಂದುವರೆಯಲಿದೆ.ಬೆಂಗಳೂರಿನಲ್ಲಿ ಬೆಳಗ್ಗೆ ಮಂಜುಕವಿದ ವಾತಾವರಣವಿದ್ದು, ಗರಿಷ್ಠ 31 ಡಿಗ್ರಿ ಸೆಲ್ಸಿಯಸ್,ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಹಿಮಾಲಯದಲ್ಲಿ ಚಂಡಮಾರುತವೇಳುತ್ತಿದ್ದು ಅದರ ಪರಿಣಾಮ ಹಲವು ರಾಜ್ಯಗಳ ಮೇಲಾಗಲಿದೆ. ಉತ್ತರಾಖಂಡದಲ್ಲೂ ಮುಂದಿನ ದಿನಗಳಲ್ಲಿ ಮಳೆಯನ್ನು ನಿರೀಕ್ಷಿಸಲಾಗಿದೆ. ಮರಾಠವಾಡ, ಕರ್ನಾಟಕದ ಉತ್ತರ ಒಳನಾಡು, ತೆಲಂಗಾಣ, ತಮಿಳುನಾಡು, ಮಧ್ಯಪ್ರದೇಶದಲ್ಲಿ ಮಳೆಯಾಗಲಿದೆ.



