ರಾಯಚೂರು: ರಾಯಚೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎರಡು ಗಂಟೆ ಗಾಳಿ, ಗುಡುಗು ಸಹಿತ ಭಾರೀ ಮಳೆಯಾಗಿದೆ. ಈ ಮಳೆಗೆ ಕಟಾವು ಮಾಡಿ ರಾಶಿ ಹಾಕಿದ್ದ ಭತ್ತ ಕೊಚ್ಚಿ ಹೋಗಿದೆ.
ಶುಕ್ರವಾರ ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಇತ್ತು. ಸತತ ಎಡಬಿಡದೆ ಮಳೆ ಸುರಿದಿದೆ. ಭಾರಿ ಗಾಳಿ ಹಿನ್ನೆಲೆ ಸಂಚಾರ ವ್ಯತ್ಯಯವಾಗಿತ್ತು. ರಸ್ತೆಗಳಲ್ಲಿ ನೀರು ತುಂಬಿ ಹರಿದೆ. ಹಿಂಗಾರಿನ ಭತ್ತ ಕಟಾವು ಮಾಡಿ ಒಂದೇ ಕಡೆ ರಾಶಿ ಹಾಕಿದ್ದ ರೈತರು. ಈ ಮಧ್ಯೆ ಬಿರುಗಾಳಿ ಸಹಿತ ಮಳೆ ಹಿನ್ನೆಲೆ ಸಾವಿರಾರು ಕ್ಚಿಂಟಲ್ ಭತ್ತ ನಾಶವಾಗಿದೆ.