ಬೆಂಗಳೂರು: ಈ ವರ್ಷ ಮುಂಗಾರಿನ ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದ್ದು, ಕೃಷಿ ಚಟುವಟಿಕೆಗಳೂ ಚುರುಕುಪಡೆದುಕೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.
ದಾವಣಗೆರೆ; ಟಿಸಿ ಅಳವಡಿಸಲು ರೈತರಿಂದ ಯಾವುದೇ ಲಂಚ ಸ್ವೀಕರಿಸಲ್ಲವೆಂದು ಆಣೆ, ಪ್ರಮಾಣ ಮಾಡಿದ ಬೆಸ್ಕಾಂ ಇಂಜಿನಿಯರ್
ವಿಧಾನಸೌಧದಲ್ಲಿ 2025ನೇ ಸಾಲಿನ ಹವಾಮಾನ ಪರಿಸ್ಥಿತಿ ಕುರಿತು ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ಈ ವರ್ಷ ಪೂರ್ವ ಮುಂಗಾರಿನಲ್ಲಿ ಹಲವು ಜಿಲ್ಲೆಗಳಲ್ಲಿವಾಡಿಕೆಗಿಂತ ಅಧಿಕ ಮಳೆಯಾಗಿದೆ. ಏಪ್ರಿಲ್ -ಮೇ ತಿಂಗಳಲ್ಲಿ ಕರಾವಳಿ ಭಾಗದಲ್ಲಿ ಉತ್ತಮ ಮಳೆಯ ನಿರೀಕ್ಷೆ ಇದೆ ಎಂದರು.
ದಾವಣಗೆರೆ: ತ್ರಿಚಕ್ರ ಬೈಕ್- ಕಾರು ಡಿಕ್ಕಿ: ಅಜ್ಜ-ಮೊಮ್ಮಗ ಸಾವು
ಸೆಪ್ಟೆಂಬರ್ ಬಳಿಕ ಹಿಂಗಾರು ಮಳೆಯೂ ಈ ವರ್ಷ ವಾಡಿಕೆಯ ಮಳೆಯಾಲಗಲಿದೆ. ಭಾರತ ಹವಾಮಾನ ಇಲಾಖೆಯ ತಾಪಮಾನ ಮುನ್ಸೂಚನೆಯ ಪ್ರಕಾರ ರಾಜ್ಯದ ಉತ್ತರ ಒಳನಾಡು, ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗರಿಷ್ಟ ತಾಪಮಾನದ ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದರು.



