ಬೆಂಗಳೂರು : ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾ ಪಟ್ಟಿಯಲ್ಲಿ ಮತ್ತೆ ಬದಲಾವಣೆ ಮಾಡಲಾಗಿದ್ದು, ಅಮತಿಮವಾಗಿ ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ವಿದ್ಯಾರ್ಥಿಗಳು ಈ ಹಿಂದೆ ಪ್ರಕಟಿಸಿ ವೇಳಾಪಟ್ಟಿ ಅನುಸರಿಸದೇ ನೂತನ ವೇಳಾಪಟ್ಟಿ ಅನುಸರಿಸಬೇಕಿದೆ.
ಏಪ್ರಿಲ್ 22 ರಿಂದ ಮೇ 18 ರವರೆಗೆ ಪರೀಕ್ಷೆಗಳು ನಡೆಯಲಿವೆ. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದ ಅಲ್ಪ ಬದಲಾವಣೆಯೊಂದಿಗೆ ಪರಿಷ್ಕೃತ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ. ಈ ಹಿಂದೆ ಪ್ರಕಟಿಸಿರುವ ಯಾವುದೇ ವೇಳಾಪಟ್ಟಿಯನ್ನು ಅನುಸರಿಸಬಾರದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಪರೀಕ್ಷೆಗಳು ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ನಡೆಯಲಿವೆ. ಮೇ 5ರಂದು ನಿಗದಿಯಾಗಿದ್ದ ಇಂಗ್ಲಿಷ್ ಪರೀಕ್ಷೆ 6 ರಂದು ನಡೆಯಲಿದೆ.
- ಪರೀಕ್ಷಾ ವೇಳಾಪಟ್ಟಿ
- ಏಪ್ರಿಲ್ 22ರಂದು ವ್ಯವಹಾರ ಅಧ್ಯಯನ ಮತ್ತು ತರ್ಕಶಾಸ್ತ್ರ
- 23ರಂದು ಗಣಿತ ಮತ್ತು ಶಿಕ್ಷಣ ಶಾಸ್ತ್ರ
- 25ರಂದು ಅರ್ಥಶಾಸ್ತ್ರ
- 26ರಂದು ರಸಾಯನವಿಜ್ಞಾನ ಮತ್ತು ಹಿಂದೂಸ್ತಾನಿ ಸಂಗೀತ ಹಾಗೂ ಮನಃಶಾಸ್ತ್ರ
- 27ರಂದು ಸಂಸ್ಕೃತ, ಮರಾಠಿ, ತಮಿಳು, ತೆಲುಗು, ಮಲಯಾಳಿ, ಉರ್ದು ಮತ್ತು ಫ್ರೆಂಚ್
- ಏ.28 ರಂದು ಕನ್ನಡ ಮತ್ತು ಅರೇಬಿಕ್
- ಮೇ 4ರಂದು ಭೂಗೋಳಶಾಸ್ತ್ರ, ಜೀವವಿಜ್ಞಾನ
- ಮೇ 5ರಂದು ಮಾಹಿತಿ ತಂತ್ರಜ್ಞಾನ ಮತ್ತು ಆಟೋಮೊಬೈಲ್
- ಮೇ 6ರಂದು ಇಂಗ್ಲಿಷ್
- 10ರಂದು ಇತಿಹಾಸ
- ಭೌತವಿಜ್ಞಾನ, 12ರಂದು ರಾಜ್ಯಶಾಸ್ತ್ರಮತ್ತು ಸಂಖ್ಯಾಶಾಸ್ತ್ರ
- 14ರಂದು ಸಮಾಜಶಾಸ್ತ್ರ, ವಿದ್ಯುನ್ಮಾನ ವಿಜ್ಞಾನ, ಗಣಕ ವಿಜ್ಞಾನ
- 17ರಂದು ಭೂಗರ್ಭಶಾಸ್ತ್ರ ಮತ್ತು ಐಚ್ಛಿಕ ಕನ್ನಡ ಹಾಗೂ ಲೆಕ್ಕಶಾಸ್ತ್ರ
- 18ರಂದು ಹಿಂದಿ
- ಇನ್ನೂ ಏ . 24, ಏ. 29 ರಿಂದ ಮೇ 2 ಮತ್ತು ಮೇ 3, ಮೇ 7 ರಿಂದ ಮೇ 9, ಮೇ 11, 13, 15 ಮತ್ತು 16ರಂದು ಯಾವುದೇ ಪರೀಕ್ಷೆಗಳು ಇರುವುದಿಲ್ಲ



