Connect with us

Dvgsuddi Kannada | online news portal | Kannada news online

ಶುಲ್ಕ ಕಡಿತಕ್ಕೆ ಒಪ್ಪದ ಖಾಸಗಿ ಶಾಲೆಗಳು; ಮತ್ತೆ ಪ್ರತಿಭಟನೆಗೆ ಮುಂದಾದ ಖಾಸಗಿ ಶಾಲೆಗಳ ಒಕ್ಕೂಟ

ಪ್ರಮುಖ ಸುದ್ದಿ

ಶುಲ್ಕ ಕಡಿತಕ್ಕೆ ಒಪ್ಪದ ಖಾಸಗಿ ಶಾಲೆಗಳು; ಮತ್ತೆ ಪ್ರತಿಭಟನೆಗೆ ಮುಂದಾದ ಖಾಸಗಿ ಶಾಲೆಗಳ ಒಕ್ಕೂಟ

ಬೆಂಗಳೂರು: ಶೇ.30ರಷ್ಟು ಶುಲ್ಕ ಕಡಿತ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಈ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ಖಾಸಗಿ ಶಾಲೆಗಳು ಮತ್ತೆ ಪ್ರತಿಭಟನೆ ನಡೆಸಲು ಮುಂದಾಗಿವೆ.

ಶುಲ್ಕ ಕಡಿತ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಖಾಸಗಿ ಶಾಲೆಗಳ ಒಕ್ಕೂಟಗಳಾದ  ಕ್ಯಾಮ್ಸ್, ಮಿಕ್ಸಾ, ಕುಸುಮ, ಸಿಬಿಎಸ್ ಇ ಹಾಗೂ ಐಸಿಎಸ್ ಇ ಶಾಲೆಗಳ ಒಕ್ಕೂಟ ಫೆ.23ರಂದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ.

ರಾಜ್ಯ ಸರ್ಕಾರ ಶೇ.30ರಷ್ಟು ಶಾಲಾ ಶುಲ್ಕ ಕಡಿತ ಮಾಡಲು ಸೂಚಿಸಿದೆ. ಇದು  ಶೇ.55ರಿಂದ 65 ರಷ್ಟು ಶುಲ್ಕ ಕಡಿತವಾದಂತಾಗಿದೆ.  ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಜೊತೆಗೆ ಶಿಕ್ಷಣ ಸಂಸ್ಥೆಗಳಿಗೂ ಹಣ ನೀಡಬೇಕು. 1-5ನೇ ತರಗತಿಗಳನ್ನೂ ಆರಂಭ ಮಾಡಲು ಅವಕಾಶ ನೀಡಬೇಕು. ಬಿಇಓ, ಡಿಡಿಪಿಐಗಳ ಭ್ರಷ್ಟಾಚಾರ ನಿಯಂತ್ರಿಸಲು ಸೂಕ್ತ ಕ್ರಮ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಫೆ.23ರಂದು ಬೃಹತ್ ಪ್ರತಿಭಟನೆ ನಡೆಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಾಗಿವೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});